ಧಾರವಾಡ, ಅ 12 (DaijiworldNews/HR): ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ವಿರುದ್ಧದ ಪ್ರಕರಣಕ್ಕೆ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ವಿಧಾನಸಭೆ ಚುನಾವಣೆ ವೇಳೆ ನಡ್ಡಾ ಮತದಾರರಿಗೆ ಆಮಿಷ ಒಡ್ಡಿದ್ದಾರೆಂದು ದೂರು ದಾಖಲಾಗಿದ್ದು, ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಭಾಷಣ ಮಾಡುವಾಗ ಮತದಾರರ ಮೇಲೆ ಪ್ರಧಾನಿ ಮೋದಿ ಆಶೀರ್ವಾದ ಇರುತ್ತದೆ ಎಂದು ನಡ್ಡಾ ಹೇಳಿದ್ದರು.
ಇನ್ನು ಈ ವೇಳೆ ನಡ್ಡಾ ಮೇಲೆ ಚುನಾವಣಾ ನೀತಿ ಸಂಹಿತೆ ಅಧಿಕಾರಿ ಲಕ್ಷ್ಮಣ ನಂದಿ ಎನ್ನುವವರು ದೂರು ದಾಖಲಿಸಿದ್ದರು.
2023ರ ಮೇ 1ರಂದು ಅಂದಿನ ಮುಖ್ಯಮಂತ್ರಿ ಹಾಗೂ ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಭಾಷಣ ಮಾಡುವಾಗ ನಡ್ಡಾ ಈ ಹೇಳಿಕೆ ನೀಡಿದ್ದರು. ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣಕ್ಕೆ ತಡೆ ಕೋರಿ ನಡ್ಡಾ ಪರ ವಕೀಲರು ಧಾರವಾಡ ಹೈಕೋರ್ಟ್ ಮೇಟ್ಟಿಲೇರಿದ್ದು ಇಂದು ವಿಚಾರಣೆ ನಡೆಸಿ ಪ್ರಕರಣಕ್ಕೆ ಧಾರವಾಡ ಹೈಕೋರ್ಟ್ ಮದ್ಯಂತರ ತಡೆ ನೀಡಿದೆ.