ಉತ್ತರ ಪ್ರದೇಶ,ಏ13(AZM):ಸಾಕು ನಾಯಿಯೊಂದು 30 ಜನರ ಪ್ರಾಣವನ್ನು ರಕ್ಷಿಸಿ ಆ ಮೂಲಕ ತನ್ನ ಪ್ರಾಣವನ್ನು ಕಳಗೊಂಡ ಘಟನೆ ಉ.ಪ್ರದೇಶದ ಬಾಂದಾದಲ್ಲಿ ನಡೆದಿದೆ.
ಪ್ರಾಣಿಗಳಲ್ಲಿ ಎಲ್ಲಾ ಪ್ರಾಣಿಗಳಿಗಿಂತಲೂ ನಿಷ್ಟಾವಂತ ಪ್ರಾಣಿ ನಾಯಿ. ಒಂದು ಹೊತ್ತಿನ ಊಟ ಹಾಕಿದರೂ ನಾಯಿಗಳಿಗೆ ಅದರ ನೆನಪಿರುತ್ತದೆ. ಇದೀಗ ಉತ್ತರ ಪ್ರದೇಶದ ಬಾಂದಾದಲ್ಲಿ ಇಂತಹ ಒಂದು ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಉತ್ತರ ಪ್ರದೇಶದ ಬಾಂದಾದಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡದ ಬೇಸ್ಮೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದೇ ವೇಳೆ ಬೆಂಕಿ ಬಿದ್ದ ತಕ್ಷಣ ಸಾಕುನಾಯಿ ಜೋರಾಗಿ ಬೊಗಳುವ ಮೂಲಕ ಕಟ್ಟದಲ್ಲಿದ ಜನರನ್ನು ಹೊರಗೆ ಬರುವುದಕ್ಕೆ ಸಹಾಯ ಮಾಡಿದ್ದು ಈ ಮೂಲಕ ಸಾಕು ನಾಯಿಯೊಂದು 30 ಜನರ ಜೀವ ಉಳಿಸಿದೆ. ಆದರೆ ಘಟನೆಯಲ್ಲಿ ಸಾಕು ನಾಯಿ ಬೆಂಕಿಗೆ ಸಿಲುಕಿ ಸಾವನ್ನಪ್ಪಿದೆ.
. ಶಾರ್ಟ್ ಸರ್ಕಿಟ್ನಿಂದ ಬೆಂಕಿ ಬಿದ್ದಿರುವ ಸಾಧ್ಯತೆ ಇದೆ ಎಂದು ಅಗ್ನಿ ಶಾಮಕ ದಳದ ಸಿಬ್ಬಂದಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇದೇ ವೇಳೆ ಅಗ್ನಿ ಅವಘಡ ನಡೆದ ವೇಳೆಯಲ್ಲಿ ಸಿಲೆಂಡರ್ಗೆ ನಾಯಿಯನ್ನು ಕಟ್ಟಿಹಾಕಲಾಗಿತ್ತು, ಹೀಗಾಗಿ ನಾಯಿ ಹೊರಗೆ ಬರುವುದಕ್ಕೆ ಸಾಧ್ಯವಾಗದೇ ಸಾವನ್ನಪ್ಪಿದೆ ಎನ್ನಲಾಗಿದೆ.