ನವದೆಹಲಿ, ಅ 13 (DaijiworldNews/HR): ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ಗುಂಪು ಹಮಾಸ್ ನಡುವಿನ ವಾರ್ ಹೆಚ್ಚಾಗುತ್ತಿರುವುದರಿಂದ ಶುಕ್ರವಾರದ ಪ್ರಾರ್ಥನೆಗಳು ಮತ್ತು ಸಂಭಾವ್ಯ ಪ್ರತಿಭಟನೆಗಳ ದೃಷ್ಟಿಯಿಂದ ದೆಹಲಿಯಲ್ಲಿ ಹೆಚ್ಚಿನ ಭದ್ರತೆ ನೀಡಲಾಗಿದೆ.
ಭದ್ರತಾ ವ್ಯವಸ್ಥೆಯ ಭಾಗವಾಗಿ, ಸೂಕ್ಷ್ಮ ಪ್ರದೇಶಗಳಲ್ಲಿ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿಯನ್ನು ಭಾರೀ ಬಲದೊಂದಿಗೆ ನಿಯೋಜಿಸಲಾಗಿದೆ.
ಇನ್ನು ಯಹೂದಿ ಧಾರ್ಮಿಕ ಸಂಸ್ಥೆಗಳು ಮತ್ತು ಇಸ್ರೇಲ್ ರಾಯಭಾರ ಕಚೇರಿಯಲ್ಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ವರದಿಯಾಗಿದೆ.
ದೇಶದಲ್ಲಿ ನೆಲೆಸಿರುವ ಇಸ್ರೇಲಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಏಜೆನ್ಸಿಗಳು ಇತರ ಕೆಲವು ರಾಜ್ಯಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ನೀಡಿವೆ ಎನ್ನಲಾಗಿದೆ.