ಹೊಸದಿಲ್ಲಿ,ಅ 14 (DaijiworldNews/AK): ಜೈಪುರದಲ್ಲಿನ 100 ಪ್ರೈವೇಟ್ ಲಾಕರ್ ಗಳು ಇದ್ದು, 500 ಕೋಟಿ ರೂ.ಗಳಿಗಿಂತ ಅಧಿಕ ಕಪ್ಪುಹಣ ಮತ್ತು 50 ಕೆ.ಜಿ. ಚಿನ್ನವನ್ನು ಲಾಕರ್ನಲ್ಲಿ ಇಡಲಾಗಿದ್ದು, ಪೊಲೀಸರು ಅದನ್ನು ಹೊರತೆಗೆಯಬೇಕು ಎಂದು ಬಿಜೆಪಿ ರಾಜ್ಯಸಭಾ ಸಂಸದ ಕಿರೋಡಿ ಮೀನಾ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ನಾನು ಈಗ ಹೆಸರುಗಳನ್ನು ಬಹಿರಂಗಪಡಿಸಿದರೆ, ರಾಜಕೀಯ ಒತ್ತಡದಲ್ಲಿ ಲಾಕರ್ಗಳನ್ನು ತೆರೆಯುವುದಿಲ್ಲ ಎಂದು ಸವಾಯಿ ಮಾಧೋಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೀನಾ ಸುದ್ದಿಗಾರರಿಗೆ ತಿಳಿಸಿದರು.
ಲಾಕರ್ ಯಾರಿಗೆ ಸೇರಿರುವ ಬಗ್ಗೆ ಮಾಹಿತಿ ನೀಡಿದರೆ ಲಾಕರ್ ತೆರೆಯದಂತೆ ರಾಜಕೀಯ ಒತ್ತಡ ಹೇರುವ ಸಾಧ್ಯತೆ ಇದೆ ಹೆಚ್ಚಿದೆ. ಹೀಗಾಗಿ ಪೊಲೀಸರನ್ನು ನೇರವಾಗಿ ಲಾಕರ್ ಇರುವ ಜಾಗಕ್ಕೆ ಕರೆದೊಯ್ಯುತ್ತೇನೆ ಎಂದರು. ಆದರೆ ಪೊಲೀಸರು ಲಾಕರ್ ತೆರೆಯಬೇಕು ಎಂದು ಆಗ್ರಹಿಸಿದ್ದಾರೆ.