ಬೆಂಗಳೂರರು,, ಅ 17 (DaijiworldNews/Ak) ಇಬ್ರಾಹಿಂ ಬಂಡಾಯದ ಹಿಂದೆ ಕಾಂಗ್ರೆಸ್ನ ಕೈವಾಡ ಇದೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಆರೋಪಿಸಿದ್ದಾರೆ.
ಚುನಾವಣೆಯೊಳಗೆ ಜೆಡಿಎಸ್ ಮುಗಿಸಲು ಹೋರಾಟ ಮಾಡುತ್ತಿದೆ, ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಮಾತು ಕೇಳಿ ನೀವು ದುಡುಕಬೇಡಿ. ನಿಮ್ಮ ಜೊತೆ ಜೆಡಿಎಸ್ ವರಿಷ್ಠರು ಇದ್ದಾರೆ ಎಂದು ಕಿವಿ ಮಾತು ಹೇಳಿದರು.
ಜೆಡಿಎಸ್ ಪಕ್ಷ ಇಬ್ಭಾಗವಾಗುವ ಸನ್ನಿವೇಶ ಈಗ ಉದ್ಭವ ಆಗಲ್ಲ. ಜೆಡಿಎಸ್ ರಾಜ್ಯದಲ್ಲಿರುವ ಪ್ರಾದೇಶಿಕ ಪಕ್ಷ. ಈ ಪಕ್ಷ ಗಟ್ಟಿಯಾಗಿ ನಿಲ್ಲುತ್ತೆ. ಸಿ.ಎಂ. ಇಬ್ರಾಹಿಂ ಅವರ ಜೊತೆ ಮಾತನಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಪರೋಕ್ಷವಾಗಿ ಇಬ್ರಾಹಿಂ ಅವರನ್ನು ಮನವೊಲಿಸುವ ಪ್ರಯತ್ನ ಮಾಡುತ್ತೇವೆ ಎಂದರು ಹೇಳಿದರು.
ಎಲ್ಲ ಕಾರ್ಯಕರ್ತರು, ಶಾಸಕರ ಸಭೆ ಕರೆದಾಗ ಇಬ್ರಾಹಿಂ ಇದ್ದರು. ಏನೇ ತೀರ್ಮಾನ ತೆಗೆದುಕೊಂಡರೂ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಅಧ್ಯಕ್ಷರು ಹೇಳಿದ್ದರು. ಅಧಿಕಾರ ಶಾಶ್ವತವಾಗಿ ಇರಬೇಕು. ಅಧಿಕಾರ ಹಂಚಿಕೆ ವಿಚಾರದಲ್ಲಿ ಸರಿಯಾಗಿ ತೀರ್ಮಾನ ಮಾಡಿ ಎಂದು ಸಲಹೆ ನೀಡಿದ್ದಾರೆ.