ಮುಂಬೈ, ಅ 20 (DaijiworldNews/MR): ಸಾಧಿಸಿದರೆ ಸಬಲ ನುಂಗಬಹುದು' ಎಂಬ ಗಾದೆಯಂತೆ ಒಬ್ಬ ವ್ಯಕ್ತಿ ಸಾಧಿಸಬೇಕೆಂಬ ದೃಢ ಸಂಕಲ್ಪವೊಂದಿದ್ದರೆ ಏನು ಬೇಕಾದರೂ ಮಾಡಬಹುದು. ಇಂತಹ ದೃಢ ಸಂಕಲ್ಪದ ಉದಾಹರಣೆಯಾಗಿ, ಐಎಎಸ್ ಟಾಪರ್ ಅನ್ಸರ್ ಅಹ್ಮದ್ ಶೇಖ್, ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ಮೊದಲ ಪ್ರಯತ್ನದಲ್ಲಿUPSC ನ್ನು 2016ರಲ್ಲಿ ತೇರ್ಗಡೆಗೊಳಿಸಿದ್ದಾರೆ.
ಅವರು AIR 361 ಅನ್ನು ಪಡೆದುಕೊಂಡಾಗ ಅವರಿಗೆ ಕೇವಲ 21 ವರ್ಷ ಆಗಿತ್ತು. ಶೇಖ್ ಮೂಲತಃ ಮಹಾರಾಷ್ಟ್ರದ ಮರಾಠವಾಡ ಜಿಲ್ಲೆಯವರು, ಅವರ ತಂದೆ ಆಟೋರಿಕ್ಷಾ ಚಾಲಕರಾಗಿದ್ದವರು ಮತ್ತು ತಾಯಿ ಕೃಷಿ ಕೆಲಸ ಮಾಡುತ್ತಿದ್ದರು. ಅವರ ಸಹೋದರ ಕುಟುಂಬವನ್ನು ನಿಬಾಯಿಸಲು ತಮ್ಮ ಶಾಲೆಯನ್ನ ಬಿಟ್ಟು ಕುಟುಂಬಕ್ಕಾಗಿ ದುಡಿಯಲು ಶುರು ಮಾಡಿದರು. ಶೇಖ್ ಅವರ ಕುಟುಂಬವು ಆರ್ಥಿಕವಾಗಿ ಬಹಳ ತೊಂದರೆಗೊಳಗಾಗಿತ್ತು.
ಓದು ಬಿಟ್ಟು ಸಂಪಾದಿಸುವ ಕಡೆಗೆ ಗಮನ ಕೊಡುವಂತೆ ಕುಟುಂಬ ಒತ್ತಡವಿತ್ತು. ಆದರೆ ಮಹತ್ವಾಂಕ್ಷಿಯಾಗಿದ್ದ ಶೇಖ್ ಅವರಿಗೆ ಸಾಧಿಸಬೇಕೆಂಬ ಛಲವಿತ್ತು. ಹೀಗಾಗಿ ಹತ್ತನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ (SSC ಬೋರ್ಡ್) 91% ಗಳಿಸಿದರು ಬಳಿಕ ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದರು. ಅವರು ತಮ್ಮ ಪದವಿಯಲ್ಲಿ ಶೇಕಡಾ 73 ರಷ್ಟು ಅಂಕ ಗಳಿಸಿದರು. ಮುಂದೆ UPSC ಪರೀಕ್ಷೆಗೆ ತಯಾರಿಯನ್ನು ಆರಂಭಿಸಿ ದಿನಕ್ಕೆ 12 ಗಂಟೆಗಳನ್ನು ತಮ್ಮ ವ್ಯಾಸಂಗಕ್ಕೆ ಮಾಡುತ್ತಿದ್ದರು.
ಕಠಿಣ ಪರಿಶ್ರಮದಿಂದ ಅವರು ಅಖಿಲ ಭಾರತ ಶ್ರೇಣಿ 361ನೇ ರ್ಯಾಂಕ್ ಪಡೆದು UPSC ಪರೀಕ್ಷೆಯಲ್ಲಿ ಯಶಸ್ವಿಯಾದರು, UPSC ಪರೀಕ್ಷೆಯಲ್ಲಿ ಯಶಸ್ಸು ಮಾತ್ರವಲ್ಲದೇ, 2016ರಲ್ಲಿ 21ನೇ ವಯಸ್ಸಿನಲ್ಲಿ ಕಿರಿಯ IAS ಅಧಿಕಾರಿ ಎಂಬ ಹೆಗ್ಗಳಿಕೆ ಕೂಡ ಪಡೆದರು.