ಚಿಕ್ಕಮಗಳೂರು,ಏ14(AZM): ಮೋದಿಗೆ ಮತ ಹಾಕದೇ ಇರುವವರು ತಾಯ್ಗಂಡರು ಎಂದು ಚಿಕ್ಕಮಗಳೂರು ನಗರ ಶಾಸಕ ಸಿ.ಟಿ ರವಿಯವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಯಾರಾದರೂ ಜಾತಿ ಕಾರಣಕ್ಕೆ, ಧರ್ಮದ ಕಾರಣಕ್ಕೆ ಮತ ಹಾಕದೇ ಹೋದರೆ ಉಂಡ ಮನೆಗೆ ದ್ರೋಹ ಬಗೆದಂತೆ ಇಲ್ಲ ನಮ್ಮ ಹಳ್ಳಿ ಕಡೆಯಲ್ಲಿ ಕರೆಯುವ ತಾಯ್ಗಂಡ ಅನ್ನೋ ರೀತಿ ಎಂದು ಹೇಳಿದ್ದಾರೆ. ಈ ಕುರಿತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದ್ದು, ಬಿಜೆಪಿ ಶಾಸಕರ ಈ ಮಾತಿನ ಬಗ್ಗೆ ಸಾಕಷ್ಟು ಆಕ್ರೋಶವಾಗಿದೆ. ಹಾಗೂ ಈ ಬಗ್ಗೆ ಚುನಾವಣಾ ಆಯೋಗ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.