ಕಾರವಾರ: ಅ.22 (DaijiworldNews/AA) ಇಲ್ಲಿನ ಬೈಕ್ಕೋಲ್ ನೌಕಾನೆಲೆಗೆ ತಮಿಳುನಾಡಿನ ಮೀನುಗಾರಿಕಾ ಬೋಟ್ ಒಂದು ದಾರಿ ತಪ್ಪಿ ಬಂದಿದ್ದು ನೌಕಾಪಡೆ ವಶಕ್ಕೆ ಪಡೆದುಕೊಂಡಿದೆ.
ದಾರಿ ತಪ್ಪಿ ಬಂದ ಈ ಬೋಟ್ ನಲ್ಲಿ ಐಸ್ ಖಾಲಿಯಾಗಿರಲಿಲ್ಲ. ಈ ಹಿನ್ನೆಲೆ ಬೋಟ್ ಬಂದರಿಗೆ ಬರಬೇಕಿತ್ತು. ಆದರೆ ಬೋಟ್ ನ ಜಿಪಿಎಸ್ ಬಂದರಿಗೆ ಬರಲು ಸರಿಯಾದ ತೋರಿಸುವಲ್ಲಿ ವಿಫಲವಾಗಿದೆ. ಪರಿಣಾಮ ಮೀನುಗಾರಿಕಾ ಬಂದರಿಗೆ ತೆರಳುವ ಬದಲು ನೌಕಾನೆಲೆಗೆ ನುಗ್ಗಿದೆ. ಬಳಿಕ ನೌಕಾಪಡೆ ಸಿಬ್ಬಂದಿಯು ಮೀನುಗಾರಿಕಾ ಬೋಟ್ನಲ್ಲಿದ್ದವರ ಆಧಾರ್ ಕಾರ್ಡ್, ದಾಖಲೆ ಪರಿಶೀಲಿಸಿ ನಂತರ ಕರಾವಳಿ ಪಡೆಗೆ ಒಪ್ಪಿಸಿದ್ದಾರೆ.
ಇನ್ನು ಕರಾವಳಿ ಕಾವಲು ಪಡೆ ದಾಖಲೆ ಪರಿಶೀಲಿಸಿ ಬಿಡುಗಡೆ ಬಗ್ಗೆ ತೀರ್ಮಾನಿಸಿದೆ.