ಬೆಂಗಳೂರು,ಏ14(AZM): ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 128 ನೇ ಜನ್ಮದಿನವಾಗಿದ್ದು,ಈ ಹಿನ್ನಲೆ ಸಮಸ್ತ ನಾಡಿನ ಜನರಿಗೆ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ಅಂಬೇಡ್ಕರ್ ಜಯಂತಿ ಶುಭಾಶಯವನ್ನು ಕೋರಿದ್ದಾರೆ.
ಅತ್ಯಂತ ಉನ್ನತ ಧ್ಯೇಯೋದ್ದೇಶಗಳನ್ನೊಳಗೊಂಡ ಸಂವಿಧಾನ ರಚಿಸುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿಕೊಟ್ಟವರು ಡಾ. ಅಂಬೇಡ್ಕರ್, ಹಾಗಾಗಿ ಅವರ ಆಶಯಗಳನ್ನು ಸಾಕಾಗೊಳಿಸಲು ಯತ್ನಿಸುವುದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವ ಎಂದು ಸಿಎಂ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.