ನವದೆಹಲಿ, ಅ 22 (DaijiworldNews/HR): ಒಂಬತ್ತು ವರ್ಷಗಳ ಸಾಧನೆಗಳನ್ನು ಪಟ್ಟಿ ಮಾಡುವಂತೆ ಅಧಿಕಾರಿಗಳಿಗೆ ಕೇಳಿಕೊಂಡಿರುವ ಕೇಂದ್ರ ಸರಕಾರದ ಇತ್ತೀಚಿನ ಆದೇಶಗಳು ಅಧಿಕಾರಶಾಹಿ ರಾಜಕೀಯ, ಅವುಗಳನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಜಂಟಿ ಕಾರ್ಯದರ್ಶಿ, ನಿರ್ದೇಶಕ ಮತ್ತು ಉಪ ಕಾರ್ಯದರ್ಶಿಯಂತಹ ಉನ್ನತ ಶ್ರೇಣಿಯ ಹಿರಿಯ ಅಧಿಕಾರಿಗಳನ್ನು ಭಾರತದ ಎಲ್ಲಾ 765 ಜಿಲ್ಲೆಗಳಿಗೆ ರಥ ಪ್ರಭಾರಿಗಳು ಎಂದು ಕೇಂದ್ರ ಸರಕಾರದ ಕಳೆದ ಒಂಬತ್ತು ವರ್ಷಗಳ ಸಾಧನೆಗಳನ್ನು ಪಟ್ಟಿ ಮಾಡಲು ನಿಯೋಜಿಸಿದೆ.
ಇನ್ನು ಅಕ್ಟೋಬರ್ 9 ರಂದು ರಕ್ಷಣ ಸಚಿವಾಲಯ ವಾರ್ಷಿಕ ರಜೆಯಲ್ಲಿರುವ ಸೈನಿಕರಿಗೆ ಸರಕಾರಿ ಯೋಜನೆಗಳನ್ನು ಪ್ರಚಾರ ಮಾಡಲು ಸಮಯ ನೀಡಲು ನಿರ್ದೇಶಿಸಿ “ಸೈನಿಕ-ರಾಯಭಾರಿಗಳು” ಮಾಡಿರುವ ಮತ್ತೊಂದು ಆದೇಶವನ್ನು ಉಲ್ಲೇಖಿಸಿದ್ದಾರೆ.
ಯಾವುದೇ ಸರಕಾರಿ ನೌಕರರು ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸಬಾರದು ಎಂದು ನಿರ್ದೇಶಿಸುವ ಕೇಂದ್ರ ನಾಗರಿಕ ಸೇವೆಗಳ ನಿಯಮಗಳು, 1964 ರ ಸ್ಪಷ್ಟ ಉಲ್ಲಂಘನೆ. ಸರಕಾರಿ ಅಧಿಕಾರಿಗಳು ಮಾಹಿತಿಯನ್ನು ಪ್ರಸಾರ ಮಾಡುವುದು ಸ್ವೀಕಾರಾರ್ಹವಾಗಿದ್ದರೂ, ಅವರನ್ನು ಆಡಳಿತ ಪಕ್ಷದ ರಾಜಕೀಯ ಕಾರ್ಯಕರ್ತರನ್ನಾಗಿ ಮಾರ್ಪಡಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.