ಶಿವಮೊಗ್ಗ, 27 (DaijiworldNews/HR): ಕರ್ನಾಟಕದಲ್ಲಿ ಬರಗಾಲದ ಛಾಯೆಯಿದ್ದು, ನಿರಂತರ ವಿದ್ಯುತ್ ನೀಡುವಂತೆ ಅಧಿಕಾರಿಗಳಿಗೆ ಹೇಳಿದ್ದೇವೆ. ಐದು ಗಂಟೆ ನಿರಂತರ ವಿದ್ಯುತ್ ನೀಡಿದರೆ ರೈತರಿಗೆ ಸಮಸ್ಯೆಯಾಗದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮುಗಿಯುತ್ತಿದ್ದು, ಮುಂದಿನ ಸ್ಮಾರ್ಟ್ ಸಿಟಿ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ತನಿಖೆ ನಡೆಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಮಾತಾಡಿದ್ದೇನೆ ಎಂದರು.
ಇನ್ನು 9 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಗಿದಿದೆ. 4 ಸಾವಿರ ಹೈದರಾಬಾದ್ ಕರ್ನಾಟಕಕ್ಕೆ ತೆಗೆದುಕೊಳ್ಳಬೇಕು. ಇದು ನ್ಯಾಯಾಲಯದಲ್ಲಿದೆ. ಆದಷ್ಟು ಬೇಗ ಇತ್ಯರ್ಥವಾಗಲಿದೆ ಎಂದು ತಿಳಿಸಿದ್ದಾರೆ.