ಹಾವೇರಿ, ಅ 29 (DaijiworldNews/HR): ಅ.28ರಂದು ಕೆಇಎ ನಡೆಸುತ್ತಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬ್ಲ್ಯೂಟೂತ್ ಬಳಸಿ ಪರೀಕ್ಷೆ ಬರೆಯಲು ಮುಂದಾಗಿದ್ದ ಅಭ್ಯರ್ಥಿಗಳನ್ನು ಕಲಬುರಗಿ ಮತ್ತು ಯಾದಗಿರಿ ಪೊಲೀಸರು ಬಂಧಿಸಿದ್ದು, ಇಂದು ಪರೀಕ್ಷಾ ಕೇಂದ್ರದಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ಹಾವೇರಿ ನಗರದಲ್ಲಿ ಇಂದು ನಡೆಯುತ್ತಿರುವ ಕೆಪಿಎಸ್ಸಿ ಪರೀಕ್ಷೆಗೆ ಉದ್ದ ತೋಳಿನ ಶರ್ಟ್ ಹಾಕಿಕೊಂಡು ಬರುವುದನ್ನು ನಿಷೇಧಿಸಲಾಗಿದ್ದು, ಉದ್ದ ತೋಳಿನ ಶರ್ಟ್ ಹಾಕಿಕೊಂಡು ಬಂದ ಅಭ್ಯರ್ಥಿಗಳು ಉದ್ದ ತೋಳನ್ನು ಕತ್ತರಿಸಿಕೊಂಡು ಹಾಫ್ ತೋಳು ಮಾಡಿ ಪರೀಕ್ಷೆಗೆ ಹಾಜರ್ ಆಗಿದ್ದಾರೆ.
ಇನ್ನು ಬಿಗಿಯಾದ ಜೀನ್ಸ್ ಧರಿಸಿದವರನ್ನೂ ಪರೀಕ್ಷೆಗೆ ಕೂರಿಸುತ್ತಿಲ್ಲ. ಹೀಗಾಗಿ ಫುಲ್ ಶರ್ಟ್ ಧರಿಸಿ ಪರೀಕ್ಷೆಗೆ ಬಂದ ಕೆಲ ಅಭ್ಯರ್ಥಿಗಳು ಬಟ್ಟೆ ಅಂಗಡಿಗೆ ಹೋಗಿ ಹಾಫ್ ಶರ್ಟ್ ಹಾಕೊಂಡು ಬಂದ್ರೆ ಮತ್ತೆ ಕೆಲ ಅಭ್ಯರ್ಥಿಗಳು ತಮ್ಮ ಶರ್ಟ್ನ ಉದ್ದದ ತೋಳನ್ನು ಕತ್ತರಿಸಿಕೊಂಡು ಹಾಫ್ ಶರ್ಟ್ ಮಾಡಿಕೊಂಡು ಪರೀಕ್ಷೆಗೆ ಕೂತಿದ್ದಾರೆ.