ಬೀದರ್,ನ. 1 (DaijiworldNews/AK): ವನ್ಯಜೀವಿಗಳ ದಂತ, ಉಗುರು, ಅಂಗಾಂಗಗಳು, ಚರ್ಮ , ಕೊಂಬುಗಳನ್ನು ಇಟ್ಟುಕೊಂಡವರು 3 ತಿಂಗಳೊಳಗೆ ವಾಪಸ್ ಮಾಡಬೇಕು ಎಂಬ ತಿರ್ಮಾನಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ರಾಜ್ಯದಲ್ಲಿ ಹಲವು ವರ್ಷಗಳಿಂದ ವನ್ಯಜೀವಿಗಳ ಉತ್ಪನ್ನಗಳನ್ನು ಇಟ್ಟುಕೊಂಡವರಿಗೆ ಅರಣ್ಯ ಸಚಿವರು ಡೆಡ್ಲೈನ್ ನೀಡಿದ್ದಾರೆ. ಈಗಾಗಲೇ ಎಲ್ಲಾ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ಮಾಡಿದ್ದು ಡೆಡ್ಲೈನ್ ಬಗ್ಗೆ ಕರಡು ಪ್ರತಿ ರೆಡಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಜನರಿಗೆ ಈ ಬಗ್ಗೆ ಅರಿವು ಇಲ್ಲ. ಹೀಗಾಗಿ ಅವುಗಳನ್ನು ತಮ್ಮಲ್ಲಿಯೇ ಇರಿಸಿಕೊಂಡಿದ್ದು, ಅವುಗಳನ್ನು ಅರಣ್ಯ ಇಲಾಖೆಗೆ ವಾಪಸ್ ಕೊಡಲು ಒಂದು ಅವಕಾಶ ನೀಡುತ್ತಿದ್ದೇವೆ. ಸಿಎಂ ಜೊತೆ ಚರ್ಚೆ ಮಾಡಿ ತಿರ್ಮಾನ ಮಾಡಿದ್ದು, ನವೆಂಬರ್ 9ಕ್ಕೆ ಸಚಿವ ಸಂಪುಟದ ಸಭೆಯಲ್ಲಿ ಮಂಡನೆ ಮಾಡಿ ಜಾರಿಗೆ ತರುತ್ತೇವೆ ಎಂದರು ಹೇಳಿದರು.