ಕೊಲ್ಕತ್ತಾ, ನ 2 (DaijiworldNews/PC): ಬಿಜೆಪಿ ಸರ್ಕಾರವು ಮುಂದಿನ ತಿಂಗಳು ನಡೆಯಲಿರುವ ರಾಜ್ಯ ಚುನಾವಣೆ ಹಾಗೂ ಮುಂದಿನ ವರ್ಷ ನಡೆಯಲಿರುವ ರಾಷ್ಟ್ರ ಚುನಾವಣೆಗೂ ಮುನ್ನ ವಿರೋಧ ಪಕ್ಷದ ವಿವಿಧ ನಾಯಕರನ್ನು ಬಂಧಿಸುವ ಸಂಚನ್ನು ಮಾಡುತ್ತಿದ್ದು, ಇಂಡಿಯಾ ರಚನೆಯ ಬಳಿಕ ಬಿಜೆಪಿ ದಂಗಾಗಿದೆ ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂದಿನ ವರ್ಷದ ಚುನಾವಣೆಗೆ ಮುನ್ನ ಬಿಜೆಪಿಯವರು ಎಲ್ಲಾ ವಿರೋಧ ಪಕ್ಷಗಳ ಮೇಲೆ ಕೇಸುಗಳನ್ನು ಹಾಕಿ ಪಕ್ಷಗಳ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆ. ಚುನಾವಣೆಗೆ ಮುನ್ನವೇ ಎಲ್ಲಾ ವಿರೋಧ ಪಕ್ಷದ ನಾಯಕರನ್ನು ಬಂಧಿಸಲು ಅವರು ಯೋಜನೆ ರೂಪಿಸುತ್ತಿದ್ದು, ಆದ್ದರಿಂದ ಅವರು ಖಾಲಿ ದೇಶದಲ್ಲಿ ಅವರವರೇ ಮತಚಲಾಯಿಸಬಹುದು ಎಂದು ಗುಡುಗಿದರು.
ಬಿಜೆಪಿಯು ವಿರೋಧ ಪಕ್ಷದ ನಾಯಕರ ಫೋನ್ಗಳನ್ನು ಹ್ಯಾಕ್ ಮಾಡುತ್ತಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿಯನ್ನು ನವೆಂಬರ್ 2 ರಂದು ಬಂಧಿಸಿ ಜೈಲಿಗೆ ಹಾಕುತ್ತಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಅತಿಶಿ ಹೇಳಿದ್ದಾರೆ. ಪಡಿತರ ವಿತರಣೆ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಗಾಳದ ಸಚಿವೆ ಜ್ಯೋತಿಪ್ರಿಯಾ ಮಲ್ಲಿಕ್ ಅವರನ್ನು ಕಳೆದ ವಾರ ಬಂಧಿಸಲಾಗಿತ್ತು. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಸಂಸದರು ತಮ್ಮಮೊಬೈಲ್ ಡಿವೈಸಿ ಪ್ರವೇಶಿಸಲು ಪ್ರಯತ್ನಿಸುತ್ತಿರುವ ರಾಜ್ಯ-ಪ್ರಾಯೋಜಿತ ದಾಳಿಕೋರರ ಎಚ್ಚರಿಕೆಯ ಸಂದೇಶಗಳನ್ನು ಆಪಲ್ನಿಂದ ಸ್ವೀಕರಿಸಿದ್ದೇವೆ ಎಂದಿದ್ದಾರೆ.