ಬೆಂಗಳೂರು, ನ 4 (DajiiworldNews/AK):ಸಚಿವರು, ಕಾಂಗ್ರೆಸ್ ಶಾಸಕರು ಬಹಿರಂಗ ಹೇಳಿಕೆ ನೀಡಿ ಭವಿಷ್ಯ ಹಾಗೂ ಪಕ್ಷದ ಭವಿಷ್ಯ ಹಾಳು ಮಾಡುವುದು ಬೇಡ ಹಾಳು ಮಾಡಿಕೊಳ್ಳೋದು ಬೇಡ. ಬೇಡ ಎಂದು ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕಾವೇರಿ ನಿವಾಸದ ಬಳಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಬಹಿರಂಗ ಹೇಳಿಕೆ ನೀಡದಂತೆ ಎಲ್ಲರಿಗೂ ಎಚ್ಚರಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಅವರವರ ಜವಾಬ್ದಾರಿಯನ್ನು ನೀಡಿದ್ದೇವೆ. ಲೋಕಸಭೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ನೀಡಲು ಸೂಚಿಸಿದ್ದೇವೆ. ಮೂರ್ನಾಲ್ಕು ದಿನದಲ್ಲಿ ವರದಿ ನೀಡಲು ವೀಕ್ಷಕರಿಗೆ ಸೂಚಿಸಿದ್ದೇವೆ ಎಂದರು.
ಈ ಹಿಂದೆ ನಾವೆಲ್ಲ ಬರ ಪ್ರವಾಸ ಮಾಡಿ ಸರ್ಕಾರಕ್ಕೆ ವರದಿ ನೀಡಿದ್ದೆವು. ಬಿಜೆಪಿ ಬರ ಅಧ್ಯಯನ ಬದಲು ಕೇಂದ್ರದಿಂದ ಹಣ ಕೊಡಿಸಲಿ ಎಂದಿದ್ದಾರೆ.
ಇದೇ ವೇಳೆ ಐಟಿ, ಇಡಿ, ಸಿಬಿಐ ಕೇಸ್ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಭಯಪಡುವುದಿಲ್ಲ. ನನ್ನ , ನನ್ನ ಹೆಂಡತಿಯ ಅಕೌಂಟ್ ಜನರ ಮುಂದಿದೆ. ತೆರಿಗೆ ಕಟ್ಟುತ್ತೇವೆ ಎಂದು ಹೇಳಿದರು.
ಇನ್ನು ಗೃಹ ಲಕ್ಷ್ಮಿ ಖಾತೆಗೆ ಹಣ ಸರಿಯಾಗಿ ಪಾವತಿಯಾಗಿಲ್ಲ. ಅದನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.