ನವದೆಹಲಿ: ನ 04 (DaijiworldNews/MR): ಖಲಿಸ್ತಾನಿ ಉಗ್ರರು ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಬೆದರಿಕೆ ಹಾಕುತ್ತಿದ್ದಾರೆ. ಕೆನಾಡದಲ್ಲಿ ಕುಳಿತಿರುವ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಮತ್ತೊಂದು ಎಚ್ಚರಿಕೆ ವಿಡಿಯೋ ಪೋಸ್ಟ್ ಮಾಡಿದ್ದಾನೆ.
ನ. 19 ರಂದು ಏರ್ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಗುರುಪತ್ವಂತ್ ಎಚ್ಚರಿಸಿದ್ದಾನೆ.ಅಂದು ಸಿಖ್ ಸಮುದಾಯದವರು ಯಾರೂ ಕೂಡ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ. ಅದೇ ದಿನ ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ನಡೆಯಲಿದೆ ಎಂದು ಬೆದರಿಕೆ ಹಾಕಿದ್ದಾರೆ.
ಏರ್ ಇಂಡಿಯಾ ವಿಮಾನದ ಮೇಲೆ ರೋಬೋಟ್ ರಾಕೆಟ್ ಮೂಲಕ ದಾಳಿ ನಡೆಸಿ ಸ್ಪೋಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅತೀ ದೊಡ್ಡ ಅವಘಡ ನಡೆಯಲಿದೆ. ಇದೇ ದಿನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದ್ ಆಗಿರುವುದರಿಂದ ಯಾವುದೇ ಸೇವೆ ನೀಡುವುದಿಲ್ಲ ಎಂದು ಗುರಪತ್ವಂತ್ ಸಿಗ್ ಪನ್ನುನ್ ವಿಡಿಯೋದಲ್ಲಿ ಹೇಳಿದ್ದಾನೆ.
ಭಾರತದ ಅರ್ಥವ್ಯವಸ್ಥೆಯನ್ನು ಹಾಳುಮಾಡುತ್ತೇವೆ, ಭಾರತಕ್ಕೆ ಇನ್ನೆಂದು ಮೇಲೆಳಲು ಸಾಧ್ಯವಾಗದ ಪೆಟ್ಟು ನೀಡುತ್ತೇವೆ. ಭಾರತದ ಸೊಕ್ಕು ಮುರಿದು ಸಿಖ್ ಸಮುದಾಯದ ಅಧಿಪತ್ಯ ಸ್ಥಾಪನೆಯಾಗಲಿದೆ ಎಂದು ಗುರುಪತ್ವಂತ್ ಸಿಂಗ್ ಪನ್ನುನ್ ವಿಡಿಯೋದ ಮೂಲಕ ಎಚ್ಚರಿಕೆ ನೀಡಿದ್ದಾನೆ.