ಹರಿಯಾಣ,ನ 05 (DaijiworldNews/MR): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಪ್ರತಿಯೊಬ್ಬ ಅಭ್ಯರ್ಥಿಯ ಕನಸಾಗಿರುತ್ತದೆ. ಈ ಸವಾಲಿನ ಪರೀಕ್ಷೆಯಲ್ಲಿ ಕೆಲವೇ ಕೆಲವು ಜನರು ಯಶಸ್ವಿಯಾಗುತ್ತಾರೆ, ಆದರೆ ದಿವ್ಯಾ ತನ್ವರ್ ಈ ಪರೀಕ್ಷೆಯಲ್ಲಿ 2 ಬಾರಿ ಉತ್ತೀರ್ಣರಾಗಿ ಸರ್ಕಾರದಲ್ಲಿ ಗೌರವಾನ್ವಿತ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
21 ವರ್ಷಕ್ಕೆ ಉನ್ನತ ಪೊಲೀಸ್ ಅಧಿಕಾರಿ ಆಗುವುದು ಸಾಮಾನ್ಯದ ವಿಷಯವಲ್ಲ. ಇಂತಹ ಹಿರಿಮೆಗೆ ಪಾತ್ರರಾದವರು, 2021ರ ಬ್ಯಾಚ್ ನ ಐಪಿಎಸ್ ಅಧಿಕಾರಿ ದಿವ್ಯಾ ತನ್ವಾರ್.
ಹರಿಯಾಣದ ಮಹೇಂದ್ರಗಢ ನಿವಾಸಿ ದಿವ್ಯಾ ತನ್ವಾರ್ UPSC ಪರೀಕ್ಷೆಯ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಬಡ ಕುಟುಂಬದಿಂದ ಬಂದಿರುವ ದಿವ್ಯಾ UPSC ಪರೀಕ್ಷೆಗೆ ತಯಾರಿ ನಡೆಸಲು ದಿವ್ಯಾ ಯಾವುದೇ ತರಬೇತಿ ಪಡೆದಿಲ್ಲ.
ಐಪಿಎಸ್ ದಿವ್ಯಾ ತನ್ವಾರ್ ಅವರು ಮಹೇಂದ್ರಗಢದ ನವೋದಯ ವಿದ್ಯಾಲಯದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದ್ದಾರೆ. ಅವರ ಮನೆಯ ಆರ್ಥಿಕ ಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ.
ಇದೇ ವೇಳೆ ಶಾಲಾ ಸಮಯದಲ್ಲಿ ಅವರ ತಂದೆಯ ಮರಣದಿಂದಾಗಿ, ಅವರ ಕುಟುಂಬ ಸಾಕಷ್ಟು ಹಣಕಾಸಿನ ಸಮಸ್ಯೆ ಎದುರಿಸಬೇಕಾಯಿತು. ಅವರ ತಾಯಿ ಮೂವರು ಮಕ್ಕಳನ್ನು ಸಾಕುವಲ್ಲಿ ಸಾಕಷ್ಟು ಕಷ್ಟಪಡಬೇಕಾಯಿತು.
ದಿವ್ಯಾ ಅಧ್ಯಯನದಲ್ಲಿ ಚುರುಕಾಗಿದ್ದರು, ಆದ್ದರಿಂದ ಅವರ ತಾಯಿ ಬಬಿತಾ ತನ್ವಾರ್ ಅವರು ಮಗಳ ಅಧ್ಯಯನಕ್ಕೆ ಅಡ್ಡಿಯಾಗದಂತೆ ನೋಡಿಕೊಂಡರು.ತಾಯಿ ಹೊಲಿಗೆ-ಕಸೂತಿ, ಕೂಲಿ ಮಾಡುವ ಮೂಲಕ ಮಕ್ಕಳನ್ನು ಸಾಕಿದ್ದಾರೆ.ದಿವ್ಯಾ BSC ಪಾಸಾದ ನಂತರ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು.
ದಿವ್ಯಾ ತನ್ವಾರ್ 2021 ರಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಪಾಸ್ ಆಗುವ ಮೂಲಕ. ಕೇವಲ 21ನೇ ವಯಸ್ಸಿನಲ್ಲಿ 438ನೇ ರ್ಯಾಂಕ್ ಪಡೆಯುವ ಮೂಲಕ ದಿವ್ಯಾ ತನ್ವಾರ್ ಯಶಸ್ವಿ ಐಪಿಎಸ್ ಅಧಿಕಾರಿಯಾದರು.
ಕೇವಲ 21ನೇ ವಯಸ್ಸಿನಲ್ಲಿ ದಿವ್ಯಾ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಐಪಿಎಸ್ ಅಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದರು. ಈ ಪರೀಕ್ಷೆಗೆ ಅವರು ಯಾವುದೇ ಕೋಚಿಂಗ್ ತೆಗೆದುಕೊಂಡಿರಲಿಲ್ಲ.
ಸ್ವಂತ ಪರಿಶ್ರಮದಿಂದ ಕಷ್ಟಪಟ್ಟು ತಾವೇ ಓದಿ ಯಶಸ್ಸು ಸಾಧಿಸಿದರು. ಆದರೆ ತಮ್ಮ ಕನಸಿನ ಐಎಎಸ್ ಪಾಸ್ ಮಾಡಲು ಅವರು ಮತ್ತೊಮ್ಮೆ ಪ್ರಯತ್ನಿಸಿದ್ದರು. 2022ರಲ್ಲಿ ಅಖಿಲ ಭಾರತ 105ನೇ ರ್ಯಾಂಕ್ ಪಡೆಯುವ ಮೂಲಕ IAS ಅಧಿಕಾರಿಯಾಗಿ ತಮ್ಮ ಕನಸು ನನಸು ಮಾಡಿಕೊಂಡರು.