ಮಂಡ್ಯ,ಏ15(AZM):ಹಳ್ಳಿಗಳ ಕಡೆ ಬಂದು, ನಮ್ಮ ಪಕ್ಷವನ್ನು ಕಳ್ಳರ ಪಕ್ಷ ಎಂದು ಹೇಳುತ್ತಿರುವ ಯಶ್ ಗತಿ ಬೇರೆಯಾಗಿರುತ್ತಿತ್ತು. ಪಕ್ಷದ ಕಾರ್ಯಕರ್ತರು ನನಗೋಸ್ಕರ ಸುಮ್ಮನಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ನಟ ಯಶ್ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಮಂಡ್ಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನು ಕಲಾವಿದರೂ ಅಂತಾ ಗೌರವ ಕೊಟ್ಟಿದ್ದಕ್ಕೆ, ನನ್ನ ಪಕ್ಷ ಕಳ್ಳರ ಪಕ್ಷ ಎಂದು ಹಳ್ಳಿಗಳ ಕಡೆ ಬಂದು ಹೇಳುತ್ತಾನೆ. ನನ್ನ ಕಾರ್ಯಕರ್ತರು ಬಾಯಿ ಮುಚ್ಚಿಕೊಂಡು ಸುಮ್ಮನಿರುವುದು ನಮ್ಮ ಕುಮಾರಸ್ವಾಮಿಗೆ ತೊಂದರೆ ಆಗಬಾರದು ಅಂತಾ ಇಲ್ಲದಿದ್ದರೆ ನಿಮ್ಮ ಗತಿ ಏನಾಗುತ್ತಿತ್ತೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನಾನು ಒಬ್ಬ ನಿರ್ಮಾಪಕನೇ. ಇಂತವರನ್ನು ಹಾಕಿಕೊಂಡು ನಾನು ಸಿನಿಮಾ ಮಾಡಿದ್ದೇನೆ. ನನ್ನಂತ ನಿರ್ಮಾಪಕರು ಇಲ್ಲದಿದ್ದರೆ ಇವರು ಏನು ಮಾಡುತ್ತಾರೆ. ಸಿನಿಮಾದಲ್ಲಿ ಹೇಳಿದಂತೆ ನಾಲ್ಕು ಡೈಲಾಗ್ ಹೊಡೆದು ಸುಮ್ಮನೆ ಹೋಗುತ್ತಾರೆ ಎಂದೆಲ್ಲಾ ಟೀಕಾ ಪ್ರಹಾರ ನಡೆಸಿದರು.