ಕೇರಳ, ನ 6 (DaijiworldNews/PC): ಕೆಲವು ದಿನಗಳ ಹಿಂದೆ ಕೇರಳದ ಕೊಚ್ಚಿಯ ಕ್ರಿಶ್ಚಿಯನ್ ಧಾರ್ಮಿಕ ಕೂಟದಲ್ಲಿ ಸಂಭವಿಸಿದ ತ್ರಿವಳಿ ಸ್ಫೋಟಗಳಲ್ಲಿ ಗಂಭೀರ ಗಾಯಗೊಂಡಿದ್ದ 61 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಂಸಲಮಸ್ಸೆರಿಯ ಮೋಲಿ ಜಾಯ್ ಅನ್ನುವವರು ಸಾವನ್ನಪ್ಪಿದ್ದವರು.ಈ ಮೂಲಕ ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ ಯಾಗಿದೆ.
ಎರ್ನಾಕುಲಂ ಜಿಲ್ಲೆಯ ಮಲಯತ್ತೂರ್ನ ಲಿಬಿನಾ ಎಂಬ 12 ವರ್ಷದ ಬಾಲಕಿ, ಹಾಗೂ ಇಬ್ಬರು ಯುವತಿಯರು ಘಟನೆ ನಡೆದ ದಿನವೇ ಸಾವನ್ನಪ್ಪಿದ್ದರು. ಸ್ಫೋಟದ ಸಂದರ್ಭದಲ್ಲಿ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.