ಹೈದರಾಬಾದ್ , ನ 6 (DaijiworldNews/AK): ತೆಲಂಗಾಣ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿರುವ ಹೊತ್ತಿನಲ್ಲಿ ಜುಬ್ಲಿ ಹಿಲ್ಸ್ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ತೆಲಂಗಾಣದ ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀ ನ್ ಅವರ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದೆ.
ಜುಬಿಲಿ ಹಿಲ್ಸ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಜರುದ್ದೀ ನ್ ಅವರು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿದ್ದಾಗ ಹಣವನ್ನು ದುರುಪಯೋಗಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಜರುದ್ದೀ ನ್ ಸೇರಿದಂತೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು, ಹಿಂದಿನ ಸದಸ್ಯರ ವಿರುದ್ಧ ರಾಚಕೊಂಡ ಪೊಲೀಸರು ನಾಲ್ಕು
ಪ್ರಕರಣಗಳನ್ನು ದಾಖಲಿಸಿದ್ದಾರೆ.
ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಜಾಮೀನು ಕೋರಿ ಅಜರುದ್ದೀ ನ್ ಮಲ್ಕಾಜ್ಗಿರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅಜರುದ್ದೀ ನ್, ಇದು ಪ್ರತಿಸ್ಪರ್ಧಿಗಳು ನನ್ನವಿರುದ್ಧ ಮಾಡಿರುವ ಪಿತೂರಿ. ನಾನು ಚುನಾವಣೆಯಲ್ಲಿ ಸ್ಫರ್ದಿಸುವ ಕಾರಣ ನನ್ನ ಘನತೆಗೆ ಧಕ್ಕೆ ಉಂಟು ಮಾಡಲು ಮಾಡಿರುವ ಹುನ್ನಾರ ಎಂದು ಹೇಳಿದ್ದಾರೆ