ಬೆಂಗಳೂರು,ನ 07 (DaijiworldNews/AK): ಕೆಇಎ ಪರೀಕ್ಷೆ ಅಕ್ರಮದ ಕಿಂಗ್ಪಿನ್ ಆರ್.ಡಿ. ಪಾಟೀಲ್ನನ್ನು ಆದಷ್ಟು ಬೇಗ ಪೊಲೀಸರು ಬಂಧಿಸಲಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಆರ್.ಡಿ. ಪಾಟೀಲ್ ಎಸ್ಕೇಪ್ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಆರ್ಡಿ ಪಾಟೀಲ್ ಎಸ್ಕೇಪ್ ಪ್ರಕರಣದಲ್ಲಿ ಪೊಲೀಸರಿಗೆ ಬಂಧನ ಮಾಡಲು ಸೂಚನೆ ನೀಡಲಾಗಿದೆ.
ಮಹಾರಾಷ್ಟ್ರದಲ್ಲಿ ತಪ್ಪಿಸಿಕೊಂಡು ಹೋಗಿರೋ ಬಗ್ಗೆ ಮಾಹಿತಿ ಇದೆ. ಪೊಲೀಸರು ಅವರನ್ನು ಅರೆಸ್ಟ್ ಮಾಡಿಕೊಂಡು ಬರುತ್ತಾರೆ. ಒಂದು ದಿನ ತಪ್ಪಿಸಿಕೊಂಡು ಹೋಗಬಹುದು. ಯಾರಾದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿ ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಈಗಾಗಲೇ ಆರ್ಡಿ ಪಾಟೀಲ್ ಮೇಲೆ ಕೇಸ್ಗಳು ಇವೆ. ಪಿಎಸ್ಐ ಕೇಸ್ನಲ್ಲೂ ಅವರ ಮೇಲೆ ಕೇಸ್ ಇದೆ. ಕೆಇಎ ಕೇಸ್ನಲ್ಲಿ ಇದ್ದಾರೆ ಅಂದರೆ ನಮಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಕ್ಷಿ ಆಧಾರಗಳು ಸಿಗುತ್ತವೆ. ಹೀಗಾಗಿ ನಾವು ಅವರನ್ನು ಅರೆಸ್ಟ್ ಮಾಡಿಕೊಂಡು ತರುತ್ತೇವೆ ಎಂದರು.
ಐಎಪಿ ಅಧಿಕಾರಿಗೆ ಆರ್ಡಿ ಪಾಟೀಲ್ ಇರುವ ಬಗ್ಗೆ ಮಾಹಿತಿ ಗೊತ್ತಿತ್ತು. ಆದರೂ ಬಂಧನ ಮಾಡದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆ ಬಗ್ಗೆ ವಿಚಾರಣೆ ಮಾಡುತ್ತೇನೆ. ಒಂದು ವೇಳೆ ನಿರ್ಲಕ್ಷ್ಯ ಇದ್ದರೆ ಐಪಿಎಸ್ ಅಧಿಕಾರಿ ಮೇಲೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಕೆಇಎ ಪರೀಕ್ಷೆ ಅಕ್ರಮ ಪ್ರಕರಣದ ಕುರಿತು ಪರಿಶೀಲನೆ ಮಾಡುತ್ತೇವೆ. ಅಗತ್ಯ ಇದ್ದರೆ ಸಿಐಡಿಗೆಕೊಡುತ್ತೇವೆ. ನಮಗೆ ಒಟ್ಟಾರೆ ತನಿಖೆ ಆಗಬೇಕು. ಸತ್ಯಾಸತ್ಯತೆ ಹೊರಗೆ ಬರಬೇಕು. ಅವರ ಮೇಲೆ ಕ್ರಮ ಆಗಬೇಕು. ಅದಕ್ಕೆ ಸಿಐಡಿ ತನಿಖೆ ಅವಶ್ಯಕತೆ ಇದ್ದರೆ ಕೊಡುತ್ತೇವೆ ಎಂದರು.