ಜಾರ್ಖಂಡ್, ನ 16 (DaijiworldNews/MR): ಜಾರ್ಖಂಡ್ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಲ್ಲಿನ ರಾಜ್ಯಪಾಲರ ಭವನದಲ್ಲಿ ನಿನ್ನೆ ಮಕ್ಕಳೊಂದಿಗೆ ಮಗುವಾಗಿ ಬೆರೆತರು. ಈ ಸಂದರ್ಭದಲ್ಲಿ ಮಕ್ಕಳನ್ನು ಅವರು ಪ್ರಾಂಕ್ ಮಾಡುತ್ತಿರುವ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದೆ.
ಜಾರ್ಖಂಡ್ನ ರಾಂಚಿಯಲ್ಲಿರುವ ಗವರ್ನರ್ ಹೌಸ್ನಲ್ಲಿ ತಮ್ಮನ್ನು ಭೇಟಿ ಮಾಡಲು ಬಂದ ಮಕ್ಕಳ ಮುಂದೆ ಅವರು ಮಗುವೇ ಆದರು. ಮಕ್ಕಳ ಕಿವಿಗಳನ್ನು ಹಿಡಿದು ಒಂದಕ್ಕೊಂದು ತಾಕಿಸುವ ಆಟವಾಡಿದರು. ಹಣೆಯ ಮೇಲೆ ನಾಣ್ಯವನ್ನು ಅಂಟಿಸಿ ಅದನ್ನು ಮಾಯ ಮಾಡುವ ಮ್ಯಾಜಿಕ್ ಅನ್ನೂ ಮಾಡಿ ತೋರಿಸಿದರು. ನಂತರ ಮಕ್ಕಳು ನಾಣ್ಯ ಕಾಣದೆ ಅಚ್ಚರಿಗೊಂಡಾಗ ಮಕ್ಕಳೆಲ್ಲ ನಕ್ಕುಬಿಟ್ಟರು.
ಪ್ರಧಾನ ಮಂತ್ರಿ ಮೋದಿಯವರ ಈ ವಿಡಿಯೋವನ್ನು ಅವರ ಇನ್ಸ್ಟಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ ಮೋದಿ ನನ್ನ ಎಳೆಯ ಗೆಳೆಯರ ಜೊತೆಗೆ ಕೆಲವು ಮರೆಯಲಾಗದ ಕ್ಷಣಗಳು ಎಂದು ಕ್ಯಾಪ್ಷನ್ ಕೂಡ ಹಾಕಿದ್ದಾರೆ.
ಇದನ್ನು ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಮಂದಿ ನೋಡಿದ್ದು, ಲೈಕ್ ಮಾಡಿದ್ದಾರೆ. ಮೋದಿ ಮಕ್ಕಳೊಂದಿಗೂ, ದೊಡ್ಡವರೊಂದಿಗೆ ಯಾವುದೇ ಭೇದ ತೋರಿಸದೆ ಬೆರೆಯುತ್ತಾರೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.