ಚೆನ್ನೈ, ನ 17 (DaijiworldNews/SK): ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆ ಸಣ್ಣ ಮಾತಲ್ಲ. ಈ ಸ್ಪರ್ಧಾತ್ಮಹ ಪರೀಕ್ಷೆಯಗೆ ಕಠಿಣ ಪರಿಶ್ರಮ, ಶ್ರದ್ದೆ ಎಷ್ಟು ಮುಖ್ಯವೋ ಅದೇ ರೀತಿ ಕುಟುಂಬದ ಬೆಂಬಲವು ಅಷ್ಟೇ ಅಗತ್ಯ. ಬಡತನದಲ್ಲಿ ಹುಟ್ಟಿಬೆಳೆದ ಶಿವಗುರು ಪ್ರಭಾಕರನ್ ಯುಪಿಎಸ್ಸಿ ನಲ್ಲಿ ಉತ್ತಮ ರ್ಯಾಂಕ್ ಪಡೆದು ಸಾಧನೆಗೈದ ಕಥೆ ನಿಜಕ್ಕೂ ಸ್ಪೂರ್ತಿದಾಯಕ.
ತಮಿಳುನಾಡು ಮೂಲದ ಎಂ ಶಿವಗುರು ಪ್ರಭಾಕರನ್ ರೈತ ಕುಟುಂಬದಲ್ಲಿ ಜನಿಸಿದವರು. ಬಾಲ್ಯದಿಂದಲೂ ಬಡತನವನ್ನು ಕಂಡವರು. ತನ್ನ ತಾಯಿ ಮತ್ತು ಸಹೋದರಿ ಒಂದು ಹೊತ್ತಿನ ಆಹಾರವಿಲ್ಲದೆ ದಿನವಿಡಿ ಗದ್ದೆಯಲ್ಲಿ ಕೆಲಸ ಮಾಡುವುದನ್ನು ಮತ್ತು ಕುಟುಂಬವನ್ನು ನಡೆಸಲು ರಾತ್ರಿಯಲ್ಲಿ ಬಿದಿರಿನ ಬುಟ್ಟಿಗಳನ್ನು ನೇಯುವುದನ್ನು ನೋಡುತ್ತಿದ್ದರು. ಆರ್ಥಿಕ ಸಮಸ್ಯೆ ಮತ್ತು ತಂದೆಯ ಕುಡಿತದ ಚಟವು ಪ್ರಭಾಕರನ್ಗೆ ದೊಡ್ಡ ಸವಾಲಾಗಿತ್ತು.
ಈ ಎಲ್ಲ ಅಡೆತಡೆಗಳಿಂದಾಗಿ, ಪ್ರಭಾಕರನ್ ಒಮ್ಮೆ ತನ್ನ ವ್ಯಾಸಂಗ ಅರ್ಧಕ್ಕೆ ನಿಲ್ಲಿಸಿ Sawmill Operator ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ಎರಡು ವರ್ಷಗಳ ಕಾಲ ಅಲ್ಲಿಯೇ ದುಡಿದು ತನ್ನ ಸಹೋದರಿಯ ಮದುವೆಯ ನಂತರ ಮತ್ತೆ ಓದಲು ಪ್ರಾರಂಭಿಸಿವುದರ ಜೊತೆಗೆ ಅವರ ಸಹೋದರನ ಶಿಕ್ಷಣಕ್ಕೂ ಸಹಾಯ ಮಾಡಿದರು.
ಹಲವು ಸಮಸ್ಯೆಗಳ ನಡುವೆ, ಅವರು 2008 ರಲ್ಲಿ ವೆಲ್ಲೂರಿನ ತಂಥೈ ಪೆರಿಯಾರ್ ಸರ್ಕಾರಿ ತಂತ್ರಜ್ಞಾನ ಸಂಸ್ಥೆಯಲ್ಲಿ ಸಿವಿಲ್ ಎಂಜಿನಿಯರಿಂಗ್ಗೆ ಪ್ರವೇಶ ಪಡೆದರು. ಅವರು ತಮ್ಮ ಕಾಲೇಜು ಶಿಕ್ಷಣವನ್ನು ಪೂರೈಸಲು ಮತ್ತು ಹಣ ಪಾವತಿಸಲು, ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮ ತಾತ್ಕಾಲಿಕ ಕೆಲಸವನ್ನು ಮುಂದುವರೆಸಿದರ ಜೊತೆಗೆ ವಾರದ ದಿನಗಳಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದರು. ಕೆಲವೊಮ್ಮೆ ಅವರ ಅಧ್ಯಯನಕ್ಕಾಗಿ ಸೇಂಟ್ ಥಾಮಸ್ ಮೌಂಟ್ ರೈಲ್ವೇ ನಿಲ್ದಾಣದ ಪ್ಲಾಟ್ಫಾರ್ಮ್ಗಳಲ್ಲಿ ತಮ್ಮ ವಾರಾಂತ್ಯವನ್ನು ಕಳೆಯುತ್ತಿದ್ದರು.
ಅಂತಿಮವಾಗಿ ಪ್ರಭಾಕರನ್ 2014 ರಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ, UPSC ಪರೀಕ್ಷೆಯತ್ತ ದೃಷ್ಟಿ ನೆಟ್ಟಿದ್ದರು. ಎಲ್ಲಾ ಹಿನ್ನಡೆಗಳನ್ನು ಎದುರಿಸುತ್ತಾ, ಮುಂದುವರಿದ ಅವರು 2017 ರಲ್ಲಿ ಅವರ ನಾಲ್ಕನೇ ಪ್ರಯತ್ನದಲ್ಲಿ, ಪ್ರಭಾಕರನ್ ಅಂತಿಮವಾಗಿ UPSC ಪರೀಕ್ಷೆಯಲ್ಲಿ 101ನೇ ರ್ಯಾಂಕ್ ಪಡೆದು IAS ಅಧಿಕಾರಿಯಾದರು.
ಕಠಿಣ ಪರಿಶ್ರಮದ ಮೂಲಕ ತಮ್ಮ ಜೀವನದಲ್ಲಿ ಯಶಸ್ಸಿ ಸಾಧಿಸಬಹುದು ಎನ್ನುವುದಕ್ಕೆ ಪ್ರಭಾಕರನ್ ಯುವಜನತೆಗೆ ಮಾದರಿಯಾಗಿದ್ದಾರೆ.