ಮುಂಬೈ, ನ 19 (DaijiworldNews/AA): ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರ್ಜಾ ಜೈಲಿನಲ್ಲಿರುವ ಮುಂಬೈ ಮೂಲದ ಡಿಜೆ ಕ್ಲಾಟಿಯಾನ್ ರೋಡ್ರಿಗಸ್ (37) ಅವರಿಗೆ 25 ವರ್ಷಗಳ ಸೆರೆವಾಸ ವಿಧಿಸಲಾಗಿತ್ತು.
ಇದೀಗ ನ್ಯಾಯಾಲಯದ ಈ ತೀರ್ಪಿನ ವಿರುದ್ದ ರೋಡ್ರಿಗಸ್ ಮಾಡಿದ ಮನವಿಯನ್ನು ಶಾರ್ಜಾ ನ್ಯಾಯಾಲಯ ತಿರಸ್ಕರಿಸಿದೆ.
ರೋಡ್ರಿಗಸ್ ಅವರು ಆರೋಪಿ ಆಂಥೋನಿ ಪೌಲ್ ಎರಡನೇ ವಿಕ್ಟಿಮ್ ಆಗಿದ್ದಾರೆ. ಆರೋಪಿ ಪೌಲ್ ನನ್ನು ಶಾರ್ಜಾ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಬಂಧಿಸಿದ್ದರು. ಇನ್ನು ನಟ ಕ್ರಿಸನ್ ಪಿರೇರಾ ಅವರು ಪೌಲ್ ನ ಮೊದಲನೇ ವಿಕ್ಟಿಮ್ ಆಗಿದ್ದು, ಆಗಸ್ಟ್ ನಲ್ಲಿ ದೇಶಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದರು.
ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ "ಕೆಳ ನ್ಯಾಯಾಲಯವು ರೋಡ್ರಿಗಸ್ ಅವರ ಅಪರಾಧದ ವಿರುದ್ಧದ ಮೇಲ್ಮನವಿಯನ್ನು ಅಲ್ಲಿನ ಹೈಕೋರ್ಟ್ ತಿರಸ್ಕರಿಸಿದೆ. ಈಗ ಅಬುಧಾಬಿಯ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಬೇಕಾಗಿದೆ. ಮೇಲ್ಮನವಿಯನ್ನು ತಿರಸ್ಕರಿಸಿರುವುದರಿಂದ, ಅವರಿಗೆ ನೀಡಲಾದ 25 ವರ್ಷಗಳ ಜೈಲು ಶಿಕ್ಷೆಯು ನಿಂತಿದೆ ಎಂದು ಅಧಿಕಾರಿ ಹೇಳಿದರು.
ಹಾಗೇ ಈ ಪ್ರಕರಣದಲ್ಲಿ ರೋಡ್ರಿಗಸ್ ಅವರನ್ನು ಅಪರಾಧಿ ಎಂದು ಬಿಂಬಿಸಲಾಗಿರುವ ಅಂಶವನ್ನು ಸುಪ್ರೀಂ ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ ಎಂದರು.