ಚೆನೈ, ನ 19 (DaijiworldNews/AK):ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ಎಸ್ ವೆಂಕಟರಾಮನ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ವೆಂಕಟರಾಮನ್ ಭಾರತೀಯ ಆಡಳಿತ ಸೇವೆಯ ಸದಸ್ಯರಾಗಿ ಹಾಗೂ ಆರ್ಬಿಐ ಗವರ್ನರ್ ಹುದ್ದೆ ಅಲಂಕಾರಿಸುವ ಮೊದಲು ಅವರು ಹಣಕಾಸು ಕಾರ್ಯದರ್ಶಿಯಾಗಿ ಬಳಿಕ ಕರ್ನಾಟಕ ಸರ್ಕಾರದ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.ಅವರು ಡಿಸೆಂಬರ್ 1990 ಮತ್ತು ಡಿಸೆಂಬರ್ 1992 ರ ನಡುವೆ ಆರ್ಬಿಐಗೆ ಸೇವೆ ಸಲ್ಲಿಸಿದ್ದರು.
ಅವರ ಕೊಡುಗೆಗಳನ್ನು ಸ್ಮರಿಸಿ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್, ವೆಂಕಟರಾಮನ್ ಅದ್ಬುತ ವ್ಯಕ್ತಿತ್ವವುಳ್ಳ, ಜನರ ಸೇವಕ ಎಂದು ಬಣ್ಣಿಸಿದ್ದಾರೆ.
ಭಾರತ ಐಎಂಎಫ್ನ ಸ್ಥಿರೀಕರಣ ಕಾರ್ಯಕ್ರಮವನ್ನು ಅಳವಡಿಸಿಕೊಂಡು, ರೂಪಾಯಿ ಅಪಮೌಲ್ಯೀಕರಣ ಮತ್ತು ಆರ್ಥಿಕ ಸುಧಾರಣೆ ಕಾರ್ಯಕ್ರಮ ಆರಂಭಿಸಲಾಯಿತು ಎಂದು ಆರ್ಬಿಐ ತಿಳಿಸಿದೆ.