ಇಂಫಾಲ್, ನ 19 (DaijiworldNews/HR): ಅಪರಿಚಿತ ಡ್ರೋನ್ಗಳು ಬಿರ್ ಟಿಕೇಂದ್ರಜಿತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಾಯುಪ್ರದೇಶದಲ್ಲಿ ಹಾರಾಟ ನಡೆಸಿದ್ದು, ವಿಮಾನ ಹಾರಾಟದ ಕಾರ್ಯಾಚರಣೆಯನ್ನು ರದ್ದು ಪಡೆಸಲಾಗಿದೆ. ಈ ಘಟನೆಯಿಂದ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಆತಂಕ ಹೆಚ್ಚಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ವಿಮಾನ ನಿಲ್ದಾಣದ ನಿರ್ದೇಶಕ ಚಿಪೆಮ್ಮಿ ಕೀಶಿಂಗ್, ಇಂಫಾಲ್ ನಿಯಂತ್ರಿತ ವಾಯುಪ್ರದೇಶದಲ್ಲಿ ಅಪರಿಚಿತ ಹಾರುವ ವಸ್ತುವೊಂದು ಕಂಡುಬಂದ ಕಾರಣ, ಎರಡು ವಿಮಾನಗಳನ್ನು ತಿರುಗಿಸಲಾಗಿದೆ ಮತ್ತು ಮೂರು ಹೊರಡುವ ವಿಮಾನಗಳು ವಿಳಂಬವಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಪ್ರತಿಕೂಲವಾದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಪರಿಗಣಿಸಿ ಸರ್ಕಾರ ಇಂಟರ್ನೆಟ್ ಸೇವೆಗಳನ್ನು ನಿಷೇಧಿಸಿತ್ತು. ಬಳಿಕ ನಿಷೇಧವನ್ನು ನ.23ರ ವರೆಗೆ ವಿಸ್ತರಿಸಿತ್ತು.