ನವದೆಹಲಿ, ನ.20(DaijiworldNews/SK): ಟರ್ಕಿಯಿಂದ ಭಾರತಕ್ಕೆ ಹೊರಟಿದ್ದ ಗ್ಯಾಲಕ್ಸಿ ಲೀಡರ್ ಸರಕು ಸಾಗಣೆ ಹಡಗನ್ನು ಯೆಮೆನ್ನ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಅಪಹರಿಸಿದ್ದಾರೆ. ಈ ಹಡಗಿನಲ್ಲಿ ವಿವಿಧ ರಾಷ್ಟ್ರಗಳಿಗೆ ಸೇರಿದ ಸುಮಾರು 25 ಸಿಬ್ಬಂದಿ ಇದ್ದಾರೆ ಎಂದು ಹೌತಿಗಳು ಸುಳ್ಳು ಮಾಹಿತಿಯನ್ನು ಹೊರಡಿಸಿದ್ದು, ಆದರೆ ಕ್ಲೇಮ್ ನಿರಾಕರಿಸಿದ ಇಸ್ರೇಲ್ ಸರ್ಕಾರವು ಅಪಹರಣ ಕುರಿತು ಇದೀಗ ಸ್ಪಷ್ಟ ಮಾಹಿತಿಯನ್ನು ನೀಡಿದೆ.
ಘಟನೆಯ ಕುರಿತು ಹೌತಿಗಳು ಇಸ್ರೇಲ್ ಹಡಗನ್ನು ಹೈಜಾಕ್ ಮಾಡಿರುವುದಾಗಿ ತಿಳಿಸಿದ್ದರು, ಆದರೆ ಹೌತಿಗಳ ಹೇಳಿಕೆಯನ್ನು ನಿರಾಕರಿಸಿರುವ ಇಸ್ರೇಲ್ ಸರ್ಕಾರ ಅಪಹರಣಕ್ಕೊಳಗಾದ ಗ್ಯಾಲಕ್ಸಿ ಲೀಡರ್ ಹಡಗಿನಲ್ಲಿ ಯಾವುದೇ ಭಾರತೀಯ ಸಿಬ್ಬಂದಿಗಳಿಲ್ಲ. ಅಲ್ಲದೆ ಅದು ಇಸ್ರೇಲ್ ನ ಹಡಗಲ್ಲ ಎಂದು ಸ್ಪಷ್ಟೀಕರಿಸಿದೆ.
ಇನ್ನು ಇಸ್ರೇಲಿ ರಕ್ಷಣಾ ಪಡೆಗಳು ಸಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಪಹರಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಹಡಗನ್ನು ಅಪಹರಣ ಮಾಡಿರುವುದು ಜಾಗತಿಕ ಪರಿಣಾಮದ ಅತ್ಯಂತ ಗಂಭೀರ ಘಟನೆಯಾಗಿದೆ. ಹೌತಿಗಳು ಅಪಹರಿಸಿರುವ ಹಡಗು ಇಸ್ರೇಲ್ಗೆ ಸೇರಿದ್ದಲ್ಲ. ಬ್ರಿಟಿಷ್ ಕಂಪನಿಯ ಒಡೆತನದ ಮತ್ತು ಜಪಾನ್ ಸಂಸ್ಥೆಯ ನಿರ್ವಹಣೆ ಮಾಡುತ್ತಿರುವ ಹಡಗನ್ನು ಯೆಮೆನ್ ಹೌತಿ ಬಂಡುಕೋರರು ಇರಾನ್ ಮಾರ್ಗದರ್ಶನದಲ್ಲಿ ಅಪಹರಿಸಿದ್ದಾರೆ. ಇರಾನ್ ಮುಂದೆ ನಿಂತು ಅಂತಾರಾಷ್ಟ್ರೀಯ ಹಡಗು ಅಪರಹರಣಕ್ಕೆ ಸಹಕಾರ ನೀಡಿರುವುದು ಬೇಸರದ ಸಂಗತಿ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಾರ್ಯಾಲಯವು ಟ್ವೀಟ್ ಮಾಡಿದೆ.