ಕೊಪ್ಪಳ, ನ 20 (DaijiworldNews/AK): ಜಗತ್ತಿನಲ್ಲಿ ಒಬ್ಬನಿಂದ ರೇಪ್ ಮಾಡಲು ಸಾಧ್ಯವಿಲ್ಲ. ಎರಡು ಕೈ ತಟ್ಟಿದ್ರೇನೇ ಚಪ್ಪಾಳೆ ಆಗೋದು ಎಂದು ಕಾಂಗ್ರೆಸ್ನ ಹಿರಿಯ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ಕುಷ್ಟಗಿ ತಾಲೂಕಿನ ಎಂ ಗುಡದೂರು ಗ್ರಾಮದಲ್ಲಿ ಮಹಿಳೆಯ ಮೇಲೆ ಕಾಂಗ್ರೆಸ್ ಮುಖಂಡ ಸಂಗನಗೌಡ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದರೂ ಆರೋಪಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಮೀನಾಮೇಷ ಎಣಿಸಲಾಗುತ್ತಿದೆ. ಈ ಹಿನ್ನೆಲೆ ಸಂತ್ರಸ್ತೆಯ ಮಾವ ನ್ಯಾಯಕ್ಕಾಗಿ ಎಸ್ಪಿ ಹಾಗೂ ಮಾಜಿ ಶಾಸಕರ ಬಳಿ ಮನವಿಗೆ ಆಗಮಿಸಿದ್ದರು.
ಆದರೆ ಈ ವೇಳೆ ಸಂತ್ರಸ್ತೆಯ ಮಾವನಿಗೆ ಪ್ರಶ್ನಿಸಿದ ಅಮರೇಗೌಡ, ಒಬ್ಬ ಹೇಗೆ ರೇಪ್ ಮಾಡಲು ಸಾಧ್ಯ? ರೇಪ್ ಆಗಬೇಕಾದರೆ 3-4 ಜನ ಇರಬೇಕು. ಒಬ್ಬಾಕೆನ ಒಬ್ಬ ರೇಪ್ ಮಾಡೋದು ಜಗತ್ತಿನಲ್ಲಿ ಯಾರಿಂದಲೂ ಸಾಧ್ಯವಿಲ್ಲ ಎಂದು ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ಆರೋಪಿ ಪರವಾಗಿಯೇ ನಿಲುವು ವ್ಯಕ್ತಪಡಿಸಿರುವ ಮಾಜಿ ಶಾಸಕ, ಎಸ್ ಪಿಗೆ ದೂರು ನೀಡಬಾರದಿತ್ತು. ನಿಮ್ಮ ಮರ್ಯಾದೆಯನ್ನು ನೀವೆ ಕಳೆದುಕೊಳ್ಳುತ್ತಿದ್ದೀಯಾ, ಒಬ್ಬರಿಂದ ಹೇಗೆ ಅತ್ಯಾಚಾರ ಮಾಡಲು ಸಾಧ್ಯ? ನೀನು ಒಬ್ಬನನ್ನು ಕರೆದುಕೊಂಡು ಬಾ, ನಾನು ಓರ್ವ ಮಹಿಳೆಯನ್ನು ಕಳುಹಿಸುತ್ತೇನೆ. ಆ ವ್ಯಕ್ತಿ ಆಕೆಯನ್ನು ಅತ್ಯಾಚಾರ ಮಾಡ ಲಿ ನೋಡೋಣ.ಸೂಕ್ಷ್ಮ ವಿಚಾರ ಇದು, ಮರ್ಯಾದೆ ಪ್ರಶ್ನೆ ಇದೆ ಯೋಚಿಸು” ಎಂದು ಸಂತ್ರಸ್ತೆ ಮಾವನಿಗೆ ಹೇಳುವ ಫೋನ್ ಸಂಭಾಷಣೆ ವೈರಲ್ ಆಗಿದೆ.
ಈ ರೀತಿ ಹೇಳಿಕೆ ನೀಡಿರುವ ಅಮರೇಗೌಡ ಬಯ್ಯಾಪುರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.