ನವದೆಹಲಿ, ನ.20 (DaijiworldNews/PC): ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಈಗ ಕೇಂದ್ರ ಸರ್ಕಾರ ರಾಜ್ಯದಲ್ಲಿ ಗ್ರಾಹಕರಿಗೆ ಪಡಿತರ ವಿತರಣೆ ವೇಳೆ ಹೊಸ ಪ್ರಿಂಟೆಡ್ ಬಿಲ್ ಜಾರಿಗೊಳಿಸಲು ವ್ಯವಸ್ಥೆಯನ್ನು ಮಾಡುತ್ತಿದೆ.
ಇತ್ತೀಚಿಗೆ ಕೋಲಾರ ಸೇರಿದಂತೆ ಮುಂದಿನ ತಿಂಗಳಿನಿಂದ ರಾಜ್ಯಾದ್ಯಂತ ಅಧಿಕೃತವಾಗಿ ಬಿಲ್ ವ್ಯವಸ್ಥೆ ಜಾರಿ ಮಾಡಲಿದ್ದು. ಈ ಮೊದಲು ಪಡಿತರ ವಿತರಣೆ ವೇಳೆಯಲ್ಲಿ ಕೈನಲ್ಲಿ ಬರೆದಿದ್ದ ಬಿಲ್ ವಿತರಣೆ ಮಾಡಲಾಗುತ್ತಿತ್ತು.
ಹೊಸ ಬಿಲ್ ವ್ಯವಸ್ಥೆಯಿಂದಾಗಿ ಅಕ್ಕಿ ವಿತರಣೆಯ ಅಕ್ರಮಕ್ಕೂ ಕೂಡ ಕಡಿವಾಣ ಹಾಕಲಿದೆ.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬರುವ ಸಮಯದಲ್ಲಿ ಈ ಅಕ್ಕಿಯ ವಿತರಣೆಯಲ್ಲಿ ಕೇಂದ್ರದ ಪಾಲು ಇದೆ ಎಂದು ಹೇಳದೆ ಪ್ರಚಾರವನ್ನು ಗಿಟ್ಟಿಸಿಕೊಂಡಿತ್ತು.
ರಾಜ್ಯದ ಅಕ್ಕಿ ವಿತರಣೆಯಲ್ಲಿ ರಾಜ್ಯ ಸರ್ಕಾರದ ಅನುದಾನದ ಪಾಲು ಶೂನ್ಯವಾಗಿದ್ದು. ರಾಜ್ಯ ಸರ್ಕಾರದ ಪಾಲಿನ ಅನುದಾನ ಗ್ರಾಹಕರ ಖಾತೆಗೆ ನೇರವಾಗಿ ಹಣದ ಮೂಲಕ ಸಂದಾಯವಾಗಲಿದೆ. ರಾಜ್ಯ ಸರ್ಕಾರದ ಉಚಿತ ಅನ್ನಭಾಗ್ಯ ಯೋಜನೆಯ ಅಸಲಿಯತ್ತನ್ನು ಜನರಿಗೆ ತಿಳಿಸಲು ಕೇಂದ್ರ ಸರ್ಕಾರ ಮಾಡಿದ ಪ್ಲಾನ್ ಇದಾಗಿದೆ.
ಕೇಂದ್ರ ಸರ್ಕಾರ ಪಡಿತರ ವಿತರಣೆಯಲ್ಲಿ ಹೊಸ ಬಿಲ್ ಪದ್ದತಿಯನ್ನು ಜಾರಿಗೆ ತರುವ ಮೂಲಕ ಜನರಿಗೆ ಯಾವ ಸರ್ಕಾರ ಎಷ್ಟು ಅಕ್ಕಿ ಕೊಡುತ್ತಿದೆ, ಅಕ್ಕಿಯಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನೊ ಯೋಜನೆ ಅನುದಾನ ಎಷ್ಟು ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಅನುದಾನ ಎಷ್ಟು ಅನ್ನೋದನ್ನು ಹೊಸ ಬಿಲ್ನಲ್ಲಿ ವಿವರವಾಗಿ ಮುದ್ರಿಸುವ ಜೊತೆಗೆ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ, ಎಷ್ಟು ಕೆಜಿ ಅಕ್ಕಿ, ಎಷ್ಟು ಕೆಜಿ ರಾಗಿ ಅಥವಾ ಜೋಳ ವಿತರಣೆಯಾಗಿದೆ ಅದಕ್ಕೆ ತಗುಲುವ ಮೊತ್ತವೆಷ್ಟು, ಆ ಅನುದಾನ ಎಲ್ಲಿಂದ ಬಂದಿದೆ. ಯಾವ ರೀತಿ ಗ್ರಾಹಕರಿಗೆ ತಲುಪಿದೆ ಎಂಬ ಪ್ರತಿಯೊಂದು ಮಾಹಿತಿಯನ್ನು ಸದ್ಯ ಹೊಸ ಬಿಲ್ನಲ್ಲಿ ದಾಖಲಾಗುವಂತೆ ಮಾಡಿದೆ.