ನವದೆಹಲಿ, ನ 21 (DaijiworldNews/PC): ಜೀವನದಲ್ಲಿ ಏನಾದರೂ ಸಾಧಿಸಲು, ಕನಸು ನನಸಾಗಿಸಿಕೊಳ್ಳಲು ವಿವಿಧ ವ್ಯಕ್ತಿಗಳನ್ನು ಸ್ಪೂರ್ತಿಯಾಗಿ ಇಟ್ಟುಕೊಂಡು ಸಾಧನೆಯ ಶಿಖರವನ್ನು ಏರುತ್ತಾರೆ. ಇಂತವರಲ್ಲಿ ಒಬ್ಬರು ತೃಪ್ತಿ ಭಟ್. ಇವರು ತಮ್ಮ ಗುರಿ ಸಾಧನೆಗಾಗಿ ಸುಮಾರು 16 ಸರ್ಕಾರಿ ಉದ್ಯೋಗದ ಆಫರ್ಗಳನ್ನು ತಿರಸ್ಕರಿಸಿದರು.
ಹೌದು ತೃಪ್ತಿ ಇವರು ಶಿಕ್ಷಕರ ಕುಟುಂಬದಲ್ಲಿ ಜನಿಸಿದವರು. ಇವರಿಗೆ ನಾಲ್ಕು ಒಡಹುಟ್ಟಿದವರಿದ್ದು, ಅವರಲ್ಲಿ ತೃಪ್ತಿಯೇ ಹಿರಿ ಮಗಳು ಆಗಿದ್ದರು. ಬೀರ್ಶೆಬಾ ಶಾಲೆಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಮಾಡಿ 12 ನೇ ತರಗತಿಯನ್ನು ಮುಂದುವರಿಸಲು ಕೇಂದ್ರೀಯ ವಿದ್ಯಾಲಯವನ್ನು ಸೇರಿದರು.
ಇವರು ಒಂಬತ್ತನೇ ತರಗತಿಯಲ್ಲಿ ಓದುತ್ತಿರುವಾಗ ಅಂದಿನ ರಾಷ್ಟ್ರಪತಿ ಡಾ ಎಪಿಜೆ ಅಬ್ದುಲ್ ಕಲಾಂ ಅವರನ್ನು ಭೇಟಿಯಾಗುವ ಅವಕಾಶ ಪಡೆದುಕೊಂಡಿದ್ದರು. ಈ ವ್ ಏಳೆಅಲ್ಲದೇ ಅಬ್ದುಲ್ ಕಲಾಂ ಅವರು ಕೈಬರಹದ ಪತ್ರವನ್ನು ನೀಡಿದ್ದು, ಆ ಪತ್ರದಲ್ಲಿ ಅನೇಕ ಸ್ಪೂರ್ತಿದಾಯಕ ವಿಷಯಗಳನ್ನು ಬರೆಯಲಾಗಿತ್ತು. ಈ ಪತ್ರ ಅವರಿಗೆ ಎಷ್ಟು ಸ್ಪೂರ್ತಿ ನೀಡಿತ್ತೆಂದರೆ ಯುಪಿಎಸ್ಸಿಯನ್ನು ಮೊದಲ ಹಂತದಲ್ಲೇ ಉತ್ತೀರ್ಣರಾಗಲು ಸಹಾಯಕಾರಿಯಾಯಿತು.
ಇವರು ಹೈಸ್ಕೂಲ್ ಮುಗಿಸಿದ ನಂತರ ಪಂತನಗರ ವಿಶ್ವವಿದ್ಯಾನಿಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಬಿ.ಟೆಕ್ ಮಾಡಲು ಹೋದರು. ಇಸ್ರೋ ಸೇರಿದಂತೆ ಆರು ಸರ್ಕಾರಿ ಉದ್ಯೋಗ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರು, ಆದರೆ ಅವರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಬೇಕೆಂಬ ಹಠ ಅವರಲ್ಲಿತ್ತು. ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಂದ ಸ್ಫೂರ್ತಿ ಪಡೆದ ನಂತರ ಇವರು ಐಪಿಎಸ್ ಅಧಿಕಾರಿಯಾಗುವ ತನ್ನ ಕನಸನ್ನು ನನಸಾಗಿಸಲು ಅವರು ಬೇರೆ ಎಲ್ಲಾ ಉದ್ಯೋಗಗಳನ್ನು ತಿರಸ್ಕರಿಸಿದರು.
ಪ್ರತಿಭಾನ್ವಿತ ಅಧಿಕಾರಿಯು ತನ್ನ ಮೊದಲ ಪ್ರಯತ್ನದಲ್ಲಿ ತನ್ನ CSE ಅನ್ನು ತೇರ್ಗಡೆಗೊಳಿಸಿದರು ಮತ್ತು 2013 ರ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 165 ನೇ ರ್ಯಾಂಕ್ ಗಳಿಸಿದರು. ಇವರು ಕೇವಲ ಪರೀಕ್ಷೆ ಅಷ್ಟೇ ಅಲ್ಲದೇ ಅವರು ಮ್ಯಾರಥಾನ್ ಮತ್ತು ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ವಿಜೇತರಾಗಿದ್ದು ಕರಾಟೆಯಲ್ಲಿ ಸಹ ಸಾಧನೆಯನ್ನು ಮಾಡಿದ್ದಾರೆ.
ಏನಾದರೂ ಸಾಧಿಸಬೇಕೆಂಬ ಛಲ ಹಾಗೂ ಹಠ ಇದ್ದರೆ ನಿಮ್ಮನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಈ ಮಾತಿಗೆ ತಕ್ಕಂತೆ ಈ ತೃಪ್ತಿ ತಮ್ಮ ಸಾಧನೆಯ ಮೂಲಕ ಇತರರನ್ನೂ ಪ್ರೇರೇಪಿಸುವಂತೆ ಮಾಡಿದ್ದಾರೆ.