ಕೊಡಗು, ನ.22(DaijiworldNews/SK): ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವ ಬೋಸರಾಜು ಪಿಎ ಹೆಸರಿನಲ್ಲಿ ಕುಶಾಲನಗರ ಕಂದಾಯ ನಿರೀಕ್ಷಕರಿಂದ ಹಣ ವಸೂಲಿ ಮಾಡುತ್ತಿದ್ದ ಘಟನೆ ನಡೆದಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ಮೈಸೂರು ಮೂಲದ ರಘುನಾಥ, ಶಿವಮೂರ್ತಿ ಎಂದು ಗುರುತಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಪಿಎ ಎಂದು ಆರ್ಐ ಸಂತೋಷ್ ಎಂಬವರಿಗೆ ಆರೋಪಿ ರಘುನಾಥ ಫೋನ್ ಕರೆ ಮಾಡಿದ್ದು, ತುರ್ತಾಗಿ 20,000 ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾರೆ.
ಇತ್ತ ರೆವಿನ್ಯೂ ಇನ್ಸ್ಪೆಕ್ಟರ್ ಸಂತೋಷ್ 20,000 ರೂ. ಗೂಗಲ್ ಪೇ ಮಾಡಿದ್ದಾರೆ. ಬಳಿಕ ಘಟನೆಯ ಕುರಿತು ಉಸ್ತುವಾರಿ ಸಚಿವರ ಕಚೇರಿಯಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಬಯಲಾಗಿದೆ. ಈ ಕುರಿತು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.