ಮುಂಬೈ, ನ 24 (DaijiworldNews/PC): ಸಾಮಾನ್ಯವಾಗಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತನ್ನು ಕೇಳಿರುತ್ತೇವೆ. ಇಂತಹದೇ ಘಟನೆಯೊಂದು ನಡೆದಿದೆ ಮಕ್ಕಳನ್ನು ಹುಟ್ಟಿದ ನಂತರ ಅದನ್ನು ಬೆಳೆಸಿ ಆ ಮಗುವನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡುವುದು ಹೆತ್ತವರ ಕರ್ತವ್ಯ ಆದರೆ ಇಲ್ಲೊಂದು ಮಹಾ ಪೋಷಕರು ಡ್ರಗ್ಸ್ ಖರೀದಿಸಲು ತನ್ನ ಹೆತ್ತ ಮಕ್ಕಳನ್ನೇ ಮಾರಾಟ ಮಾಡಿದ ಘಟನೆ ನಡೆದಿದೆ.
ಮಾದಕ ವ್ಯಸನಿಗಳಾಗಿದ್ದ ದಂಪತಿಗಳು ಅಂಧೇರಿಯಲ್ಲಿ ತಮ್ಮ ಇಬ್ಬರು ಮಕ್ಕಳನ್ನು ಮಾರಾಟ ಮಾಡಿ ಹಣ ಸಂಪಾದಿಸಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಒಂದು ತಿಂಗಳ ಹೆಣ್ಣು ಮಗುವನ್ನು 14 ಸಾವಿರ ರೂ.ಗಳಿಗೆ,ಗಂಡು ಮಗುವನ್ನು 60 ಸಾವಿರ ರೂ.ಗೆ, ಮಾರಾಟ ಮಾಡಿದ್ದಾರೆ. ಈ ಘಟನೆ ತಿಳಿದ ಕುಟುಂಬ ತಕ್ಷಣ ಡಿ.ಎನ್.ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಿಕಿಗೆ ಬಂದಿದ್ದು, ಬಂಧಿಸಲಾಗಿದೆ ಎಂದು ಮುಂಬೈ ಅಪರಾಧ ವಿಭಾಗದ ದಯಾ ನಾಯಕ್ ತಿಳಿಸಿದ್ದಾರೆ.
ಪೋಷಕರಾದ ಶಬ್ಬೀರ್, ಸಾನಿಯಾ ಮತ್ತು ಶಕೀಲ್ ಮಕ್ರಾನಿ ಅನ್ನು ಬಂಧಿಸಲಾಗಿದ್ದು,ಹಾಗೂ ಅಲ್ಲದೇ ಮಾರಾಟದಿಂದ ಕಮಿಷನ್ ಪಡೆದ ಆರೋಪಿ ಉಷಾ ರಾಥೋಥ್ ಎಂಬಾಕೆಯನ್ನೂ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ನ.24 ಅಂಧೇರಿಯಲ್ಲಿ ಒಂದು ತಿಂಗಳ ಒಂದು ಮಗುವನ್ನು ರಕ್ಷಣೆ ಮಾಡಿದ್ದು, 2 ವರ್ಷದ ಮತ್ತೊಂದು ಮಗುವಿಗಾಗಿ ಹುಡುಕಾಟ ನಡೆಯುತ್ತಿದೆ. ಸದ್ಯ ಮಕ್ಕಳನ್ನು ಖರೀದಿಸಿದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಡಿ.ಎನ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಿದ್ದಾರೆ.