ಚಿಕ್ಕಮಗಳೂರು, ನ 24 (DaijiworldNews/HR): ವ್ಯಾಪಾರ ವ್ಯವಹಾರಕ್ಕೆ ಸಂಬಂದಿಸಿ ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮೂಲದ ಟಿ.ಎಸ್ ಶ್ರೀನಾಥ ಎಂಬವರಿಗೆ ನಾಲ್ಕು ತಿಂಗಳ ಶಿಕ್ಷೆ ಹಾಗೂ ಇದಕ್ಕೆ ತಪ್ಪಿದಲ್ಲಿ ಸರಿ ಸಮನಾದ ದಂಡ ವಿಧಿಸಿ ಚಿಕ್ಕಮಗಳೂರು ಜೆಎಂಎಸಿ ನ್ಯಾಯಾಲಯ ತೀರ್ಪು ನೀಡಿದೆ.
ಕಡಬ ತಾಲೂಕು ಕುಲ್ಕುಂದ ನಿವಾಸಿ ಲಕ್ಷ್ಮಿ ನಿವಾಸದ ಟಿ.ಎಸ್ ಶ್ರೀನಾಥ್ ಎಂಬಾತ ಚಿಕ್ಕಮಗಳೂರು ಗೌರಿಕಲ್ವೆ ನಿವಾಸಿ ಕೃಷಿಕ ಕೆ ಸುರಕ್ಷಾ( 37) ಎಂಬವರ ಜೊತೆ ವ್ಯವಹಾರ ಹೊಂದಿದ್ದರು.
ಇನ್ನು ವ್ಯಾಪರದ ದುಡ್ಡು ಕೊಡುವ- ಪಡೆಯುವ ವೇಳೆ ಪ್ರತಿಯಾಗಿ ಶ್ರೀನಾಥ್ ಚೆಕ್ ಅನ್ನು ದೂರುದಾರರಿಗೆ ನೀಡಿದ್ದು ಬಳಿಕ ಖಾತೆ ಬರಿದಾಗಿ ಚೆಕ್ ಬೌನ್ಸ್ ಆಗಿತ್ತು. ಪ್ರಕರಣ ಸಂಬಂಧ ಅನ್ಯಾಯಕ್ಕೆ ಒಳಗಾದ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿದ್ದರು. (C C 782/2021) ಪ್ರಕರಣ ಸಂಬಂಧ ನ.22ರಂದು ಚಿಕ್ಕಮಗಳೂರು ಸಿವಿಲ್ ಜಡ್ಜ್ ಮತ್ತು ಐಎಂಎಪ್ ಸಿ ಕೋರ್ಟ್ ತೀರ್ಪು ಪ್ರಕಟಿಸಿದೆ.
ತೀರ್ಪಿನಲ್ಲಿ .ಎಸ್.ಶ್ರೀನಾಥ್ : ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಕಲಂ 255 ( 2 ) ರ ಅಡಿಯಲ್ಲಿ ಕಾರ್ಯನಿರ್ವಹಿಸಿ, ಆರೋಪಿಯನ್ನು ಈ ಮೂಲಕ ಅಪರಾಧ 1 ನೇ ಕಲಂ 3 ರ ಅಪರಾಧಕ್ಕಾಗಿ ಶಿಕ್ಷೆಗೆ ಗುರಿಪಡಿಸಲಾಗಿದೆ. ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, 1881. ಆರೋಪಿಗೆ ರೂ. 5,18,100/( ಆರು ಲಕ್ಷ ಹತ್ತು ಸಾವಿರ ರೂಪಾಯಿಗಳು ಮಾತ್ರ) ದಂಡವನ್ನು ಪಾವತಿಸಲು ಈ ಮೂಲಕ ತೀರ್ಪಿನಲ್ಲಿ ಶಿಕ್ಷೆ ವಿಧಿಸಲಾಗಿದೆ, ತಪ್ಪಿದಲ್ಲಿ ಆರೋಪಿಯು ನಾಲ್ಕು ತಿಂಗಳ ಅವಧಿಗೆ ಸರಳ ಜೈಲು ಶಿಕ್ಷೆಗೆ ಗುರಿಪಡಿಸುವಂತೆ ಸೂಚಿಸಿದೆ.
ಮೇಲ್ಕಂಡ ದಂಡದ ಮೊತ್ತದಲ್ಲಿ Cr.P.C ಯ ಸೆಕ್ಷನ್ 357 ( 3 ) ಅಡಿಯಲ್ಲಿ ಆರೋಪಿಯು ರೂ. 5,08,100 ಪರಿಹಾರದ ಮೂಲಕ ದೂರುದಾರರಿಗೆ ಪಾವತಿಸಬೇಕು ಮತ್ತು ಉಳಿದ ರೂ 10,000 ಅನ್ನು ರಾಜ್ಯಕ್ಕೆ ಪಾವತಿಸಬೇಕು. ಜಾಮೀನು ಬಾಂಡ್ ಮತ್ತು ಜಾಮೀನು ಬಾಂಡ್ ಅನ್ನು ರದ್ದುಗೊಳಿಸಲಾಗಿದೆ. ದೂರುದಾರರ ಪರವಾಗಿ ನ್ಯಾಯವಾದಿ ದೇವೆಂದರ್ ಕುಮಾರ್ ಜೈನ್ ವಾದಿಸಿದ್ದು ಶಿಕ್ಷೆಗೊಳಗಾದ ವ್ಯಕ್ತಿಯ ನ್ಯಾಯವಾದಿ ಕೆ. ಆರ್ ಪ್ರಶಾಂತ್ ಪ್ರತಿವಾದಿಯಾಗಿದ್ದರು.
ಟಿ. ಎಸ್ ಶ್ರೀನಾಥ್ ಅವರ ವಿರುದ್ಧ ಈ ಹಿಂದೆಯೂ ಹಲವು ವಂಚನೆ ಆರೋಪ ವ್ಯಕ್ತವಾಗಿತ್ತು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರನ್ನು ದಾರಿ ತಪ್ಪಿಸಿದ ಬಗ್ಗೆಯೂ ದೂರುಗಳು ಕೇಳಿಬಂದಿದ್ದವು.