ಮಧ್ಯಪ್ರದೇಶ: ನ 25 (DaijiworldNews/MR) : ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ತನ್ನ ವಿರುದ್ಧ ಪದೇ ಪದೆ ಬರುತ್ತಿದ್ದ ದ್ವೇಷದ, ಮನನೋಯಿಸುವ ಕಾಮೆಂಟ್ಗಳಿಂದ ನೊಂದ ಕ್ವಿಯರ್ ಕಲಾವಿದರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಘಟನೆ ನಡೆದಿದ್ದು, ಪ್ರಾಂಶು (16) ಆತ್ಮಹತ್ಯೆ ಮಾಡಿಕೊಂಡ ಕಲಾವಿದ. ಆತ ಮಂಗಳವಾರ ತಮ್ಮ ತಾಯಿಯ ದುಪಟ್ಟಾದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಪ್ರಾಂಶು ಸಿನಿಮಾ ನಟ ನಟಿಯರಿಗೆ ಮೇಕಪ್ ಕಲಾವಿದರಾಗಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ಮೇಕಪ್ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ವಿಷಯವನ್ನು ಹಂಚಿಕೊಳ್ಳುತ್ತಿದ್ದ ಅವರಿಗೆ ಅಲ್ಲಿ 14,500ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದರು. ದೀಪಾವಳಿಯ ಸಮಯದಲ್ಲಿ, ಪ್ರಾಂಶು ತಾನು ಸೀರೆ ಧರಿಸಿದ್ದ ರೀಲ್ನ್ನು ಪೋಸ್ಟ್ ಮಾಡಿದ್ದರು. ಅದಕ್ಕೆ ಅನೇಕ ಜನ ದ್ವೇಷಪೂರಿತ ಮತ್ತು ಹೋಮೋಫೋಬಿಕ್ ಟೀಕೆಗಳನ್ನು ಮಾಡಿದ್ದರು.
ಕಲಾವಿದ ಪ್ರಾಂಶು ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ 4,000ಕ್ಕೂ ಹೆಚ್ಚು ಹೋಮೋಫೋಬಿಕ್ ಟೀಕೆಗಳು ಕಾಮೆಂಟ್ ವಿಭಾಗದಲ್ಲಿ ಬಂದಿವೆ. ಅದು ಅವರನ್ನು ಆತ್ಮಹತ್ಯೆಗೆ ಪ್ರಚೋದಿಸಿದೆ ಎನ್ನಲಾಗಿದೆ. ಪ್ರಾಂಶು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ 16,500ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರು.
glamitupwithpranshu ಎಂದು ಮೇಡ್ ಇನ್ ಹೆವನ್ ವೆಬ್ ಸೀರಿಸ್ ನಟ ತ್ರಿನೇತ್ರ ಹಲ್ದಾರ್ ಅವರು ಪೋಸ್ಟ್ ಮಾಡಿದ್ದಾರೆ.
ಮೆಟಾ ಒಡೆತನದ ಇನ್ಸ್ಟಾಗ್ರಾಮ್ ನಂತಹ ಆನ್ಲೈನ್ ಪ್ಲಾಟ್ಫಾರ್ಮ್ಗಳು LGBTQ ಸಮುದಾಯದ ಜನರಿಗೆ ಸುರಕ್ಷಿತ ಸ್ಥಳ ಒದಗಿಸಲು ವಿಫಲವಾಗಿವೆ ಎಂದು ನಟ ತ್ರಿನೇತ್ರ ಅಸಮಾಧಾನ ಹೊರಹಾಕಿದ್ದಾರೆ.