ನವದೆಹಲಿ, ನ 28 (DaijiworldNews/SK): ತೆಲಂಗಾಣ ಪತ್ರಿಕೆಗಳಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕುರಿತು ಜಾಹೀರಾತುಗಳನ್ನು ನೀಡುತ್ತಿದ್ದು ಇದಕ್ಕೆ ಚುನಾವಣಾ ಆಯೋಗ ನಿಷೇಧಿಸಿದೆ.
ಇದೇ ಗುರುವಾರ ನ.30 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತೆಲಂಗಾಣದ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಬಿತ್ತರಿಸುತ್ತಿದೆ ಎಂದು ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಆರೋಪಿಸಿ ಬಿಜೆಪಿ ಆಯೋಗಕ್ಕೆ ದೂರು ಸಲ್ಲಿಸಿತ್ತು.
ಇನ್ನು ಈ ವಿಚಾರವಾಗಿ ಬಿಆರ್ಎಸ್ ಕೂಡ ಚುನಾವಣಾ ಆಯೋಗ ಸಮಿತಿಯನ್ನು ಸಂಪರ್ಕಿಸಿತ್ತು.
ಕರ್ನಾಟಕ ಸರ್ಕಾರದ ಕ್ರಮವು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದಿರುವ ಚುನಾವಣೆ ಆಯೋಗವು ಅಗತ್ಯ ಅನುಮತಿ ಪಡೆಯುವವರೆಗೂ ಸರ್ಕಾರದ ಜಾಹೀರಾತುಗಳ ಪ್ರಸಾರವನ್ನು ಕೂಡಲೇ ನಿಲ್ಲಿಸಬೇಕು ಎಂದು ಆದೇಶ ಮಾಡಿದೆ. ಇನ್ನು ನೋಟಿಸ್ಗೆ ನ. 28 ರಂದು ಸಂಜೆ 5 ಗಂಟೆಯ ಒಳಗೆ ಉತ್ತರ ನೀಡಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ.