ಹೈದರಾಬಾದ್, ನ 29(DaijiworldNews/SK): ಕಳೆದ ಕೆಲವು ದಶಕಗಳಿಂದ ವಿಶೇಷವಾಗಿ ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ಇಂದು ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇದರಲ್ಲಿ ವಾಣಿಜ್ಯೋದ್ಯಮಿ ಮತ್ತು ಹೂಡಿಕೆದಾರರಾದ ವಾಣಿ ಕೋಲ ಕೂಡ ಒಬ್ಬರು.
ಹೌದು, ಅರುಣಾಚಲ ಪ್ರದೇಶದ ಹೈದರಾಬಾದ್ನಲ್ಲಿ ಹುಟ್ಟಿ ಬೆಳೆದ ವಾಣಿ, ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಪದವಿಯನ್ನು ಪಡೆದರು. ನಂತರ ವಾಣಿ 1980 ರ ದಶಕದ ಉತ್ತರಾರ್ಧದಲ್ಲಿ ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯಿಂದ ಸ್ನಾತಕೋತ್ತರ ಪದವಿಯನ್ನು ಪಡೆಯಲು ಯುನೈಟೆಡ್ ಸ್ಟೇಟ್ಸ್ಗೆ ತೆರಳಿದರು. ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯಿಂದ ಪದವಿ ಪಡೆದ ಅವರು ಮೆಟಾ, ಆಪಲ್, ಇತ್ಯಾದಿಗಳಂತಹ ನೂರಾರು ಹೈಟೆಕ್ ಕಂಪನಿಗಳಿಗೆ ನೆಲೆಯಾಗಿರುವ ಸಿಲಿಕಾನ್ ನಲ್ಲಿ ದುಡಿದರು ಮಾತ್ರವಲ್ಲದೇ ಎಂಪ್ರೋಸ್, ಕಂಟ್ರೋಲ್ ಡೇಟಾ ಕಾರ್ಪೊರೇಷನ್ ಮತ್ತು ಕಾನ್ಸಿಲಿಯಮ್ ಇಂಕ್ನಂತಹ ಹಲವಾರು ಹೆಸರಾಂತ ಕಂಪನಿಗಳಲ್ಲಿ ಕೆಲಸ ಮಾಡುವ ಮೂಲಕ ಸೈ ಎನಿಸಿಕೊಂಡರು.
ದುಡಿಮೆಯ ನಡುವೆಯು ತಮ್ಮಲ್ಲಿರುವ ವಾಣಿಜ್ಯೋದ್ಯಮದೆಡೆಗಿರುವ ತಮ್ಮ ತುಡಿತವನ್ನು ಅಂತ್ಯಗೊಳಿಸದೆ 1996 ರಲ್ಲಿ, ವಾಣಿ ರೈಟ್ವರ್ಕ್ಸ್ ಎಂಬ ತನ್ನ ಮೊದಲ ಕಂಪನಿಯನ್ನು ಸ್ಥಾಪಿಸಿದರು. ಆ ಸಂಸ್ಥೆಯಲ್ಲಿ 5 ವರ್ಷಗಳ ಕಾಲ CEO ಆಗಿ ಕಾರ್ಯನಿರ್ವಹಿಸಿದರು.
USA ನಲ್ಲಿ 22 ವರ್ಷಗಳ ದುಡಿದ ಅವರು 41 ನೇ ವಯಸ್ಸಿನಲ್ಲಿ ಭಾರತಕ್ಕೆ ಮರಳಿದರು. ಭಾರತದಲ್ಲೂ 2006 ರಲ್ಲಿ ಕಲಾರಿ ಕ್ಯಾಪಿಟಲ್ ಎಂಬ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಹೆಸರುವಾಸಿಯಾದರು.
ಮುಖ್ಯವಾಗಿ ಕಲಾರಿ ಕ್ಯಾಪಿಟಲ್ನ ಪ್ರಾಥಮಿಕ ಉದ್ದೇಶವು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದು. ಇದರ ಜೊತೆಗೆ ವಾಣಿ ಅವರು 200 ಕ್ಕೂ ಹೆಚ್ಚು ಕಂಪನಿಗಳಲ್ಲಿ ಹೂಡಿಕೆ ಮಾಡುವುದರ ಮೂಲಕ ಇತರ ಮಹಿಳೆಯರಿಗೂ ಪ್ರೇರಣೆಯಾಗಿದ್ದಾರೆ.