ನವದೆಹಲಿ, ಡಿ 01 (DaijiworldNews/AA): ಮಿಜೋರಾಂ ನ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ದಿನಾಂಕವನ್ನು ಡಿಸೆಂಬರ್ 3 ರಿಂದ ಡಿಸೆಂಬರ್ 4 ಕ್ಕೆ ಚುನಾವಣಾ ಆಯೋಗ ಮುಂದೂಡಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಚುನಾವಣಾ ಆಯೋಗವು ಮಿಜೋರಾಂ ರಾಜ್ಯದಲ್ಲಿ ಮತ ಎಣಿಕೆಯ ದಿನಾಂಕದ ಬದಲಾವಣೆಗಾಗಿ ವಿವಿಧ ವಲಯಗಳಿಂದ ಮನವಿ ಮಾಡಲಾಗಿತ್ತು. ಈ ಮನವಿಗಳನ್ನೆಲ್ಲ ಪರಿಗಣಿಸಿ ಮತ ಎಣಿಕೆಯ ದಿನಾಂಕವನ್ನು ಬದಲಾವಣೆ ಮಾಡುತ್ತಿರುವುದಾಗಿ ತಿಳಿಸಿದೆ.
ಮಿಜೋರಾಂ ನಲ್ಲಿ ಕ್ರಿಶ್ಚಿಯನ್ ಸಮುದಾಯವರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಡಿಸೆಂಬರ್ 3 ಅಂದರೆ ಭಾನುವಾರ ಅವರಿಗೆ ವಿಶೇಷ ದಿನವಾಗಿರುತ್ತದೆ. ಇದನ್ನು ಪರಿಗಣಿಸಿದ ಚುನಾವಣಾ ಆಯೋಗವು ಮತ ಎಣಿಕೆಯ ದಿನವನ್ನು ಮುಂದೂಡಿದೆ.