ಉದಯಪುರ, ಡಿ 03 (DaijiworldNews/MS): ಯಾವುದೇ ಕೋಚಿಂಗ್ ಕ್ಲಾಸ್ಗೆ ಹಾಜರಾಗದೇ, ಸ್ವಯಂ-ಅಧ್ಯಯನ ಮೂಲಕ ಯುಪಿಎಸ್ ಸಿ ಎದುರಿಸಿ ಐಎಎಸ್ ಅಧಿಕಾರಿಯಾದ ಉದಯಪುರದ ಮೂಲದ ಪೂರ್ವಿ ನಂದಾ ಯಶೋಗಾಥೆ ಇದು.
ತಮ್ಮ ಶಾಲಾ ಶಿಕ್ಷಣವನ್ನು ಉದಯಪುರದಲ್ಲಿದ್ದ ಸ್ಥಳೀಯ ಸೇಂಟ್ ಮೇರಿಸ್ ಶಾಲೆಯಲ್ಲಿ ಪಡೆದಿದ್ದ ಪೂರ್ವಿ, ಮುಂದೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದಿಂದ 2019 ರಲ್ಲಿ ಎಲ್ಎಲ್ಬಿ ಪದವಿ ಪಡೆದರು. ಪೂರ್ವಿ ಅವರ ತಂದೆ ಪಿತಾಂಬರ ನಂದಾ ಅವರು ಮಗಳಲ್ಲಿ ಯುಪಿಎಸ್ ಸಿ ಪರೀಕ್ಷೆ ಎದುರಿಸುವ ಕನಸನ್ನು ಬಿತ್ತಿದ್ದರು. ಹೀಗಾಗಿ ಪೂರ್ವಿ ಯುಪಿಎಸ್ ಸಿ ಪರೀಕ್ಷೆ ಬರೆಯಲೆಂದು ಸಾಮಾಜಿಕ ಜಾಲತಾಣಗಳಿಂದ ದೂರವಾಗಿ ಮತ್ತು ಏಕಾಗ್ರತೆಯನ್ನು ಸಾಧಿಸಲು ಮತ್ತು ಮನಸ್ಸಿನ ಗೊಂದಲ ನಿವಾರಿಸಲು ಫೋನ್ ಬಳಕೆ ಸೀಮಿತಗೊಳಿಸಿದರು. ಯಾವುದೇ ಕೋಚಿಂಗ್ ಕ್ಲಾಸ್ಗೆ ದಾಖಲಾಗದೆ ಕಠಿಣ ಸ್ವಯಂ-ಅಧ್ಯಯನಕ್ಕೆ, ಪ್ರತಿದಿನ 10 ರಿಂದ 11 ಗಂಟೆಗಳನ್ನು ಮೀಸಲಿರಿಸಿದರು.
ಪರೀಕ್ಷೆಯ ಮಾದರಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಅವಳ ಜ್ಞಾನವನ್ನು ಓರೆಗೆ ಹಚ್ಚಲು ಹಳೆ ಪ್ರಶ್ನೆಪತ್ರಿಕೆಗಳನ್ನು ಪರಿಹರಿಸುವತ್ತ ಹೆಚ್ಚಿನ ಗಮನಕೊಟ್ಟರು.
ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 224 ನೇ ಸ್ಥಾನ ಪಡೆದರು. 2020ರಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಸ್ಥಾನ ಪಡೆಯುವ ಮೂಲಕ ಐಆರ್ಎಸ್ ( ಭಾರತೀಯ ಕಂದಾಯ ಸೇವೆ) ಕೇಡರ್ ದೊರೆತಾಗ ಅವರ ಶ್ರಮಕ್ಕೆ ಫಲ ಸಿಕ್ಕಿತು.
ಪೂರ್ವಿ ನಂದಾ ಅವರು ಯಾವುದೇ ತರಬೇತಿ ಇಲ್ಲದೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನುಭವವನ್ನು “ಬಿಹೈಂಡ್ ದಿ ಸೀನ್: ದಿ ಅನ್ಟೋಲ್ಡ್ ಸ್ಟೋರೀಸ್ ಆಫ್ ಯುಪಿಎಸ್ಸಿ ಅಸ್ಪಿರೆಂಟ್ಸ್” ಎಂಬ ತಮ್ಮ ಪುಸ್ತಕದಲ್ಲಿ ವಿವರಿಸಿದ್ದು ಇದು ಅನೇಕರಿಗೆ ಸ್ಪೂರ್ತಿದಾಯಕವಾಗಿದೆ.