ನವದೆಹಲಿ, ಡಿ 03 (DaijiworldNews/HR): ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಪ್ರಾರಂಭವಾಗಲಿದ್ದು, ಪ್ರತಿಪಕ್ಷಗಳು ಸಂಸತ್ತಿಗೆ ಅಡ್ಡಿಪಡಿಸಿದರೆ ಕೆಟ್ಟ ಫಲಿತಾಂಶ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವು ಎಲ್ಲಾ ವಿಚಾರಗಳ ಚರ್ಚೆಗೆ ಸಿದ್ದವಿದೆ, ಆದರೆ ನಿಯಮಾನುಸಾರವಾಗಿ ಇದು ನಡೆಯಬೇಕು ಎಂದರು.
ಇನ್ನು 15 ದಿನದ ಅಧಿವೇಶನ ನಡೆಯಲಿದ್ದು, ರಚನಾತ್ಮಕ ಚರ್ಚೆಗಳ ವಾತಾವರಣವನ್ನು ಕಾಯ್ದುಕೊಳ್ಳಬೇಕು ಎಂದು ನಾವು ವಿನಂತಿಸಿದ್ದೇವೆ ಎಂದಿದ್ದಾರೆ.