ಬೆಂಗಳೂರು, ಡಿ 05 (DaijiworldNews/PC): ಗಂಡ ಪ್ರತಿದಿನ ಕಚೇರಿಗೆ ಹೋದ ನಂತರ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಪ್ರಿಯಕರನೊಂದಿಗೆ ಜೂಟಾಟ ಆಡುತ್ತಿದ್ದ ಮಾಹಿತಿಯನ್ನು ತಿಳಿದ ಗಂಡ ತನ್ನ ಪತ್ನಿಯ ಮೊಬೈಲ್ ಒಡೆದು ಹಾಕಿದ್ದಾನೆ.
ಇದರಿಂದ ಕೋಪಗೊಂಡ ಪತ್ನಿ ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನ ಫೋನ್ ನಲ್ಲಿ ಆರ್ ಡಿ ಎಕ್ಸ್ ಬಾಂಬ್ ಸ್ಫೋಟಿಸುವುದಾಗಿ ಪೊಲೀಸರಿಗೆ ಸಂದೇಶ ಕಳಿಸಿದ್ದು ಇದನ್ನು ಪತ್ತೆಹಚ್ಚಿ ಬಂದ ಪೊಲೀಸರು ಗಂಡ ಹೆಂಡತಿ ಇಬ್ಬರನ್ನೂ ಬಂಧಿಸಿ ಜೈಲಿಗೆ ಹಾಕಿದ್ದಾರೆ.
ಉತ್ತರ ಕರ್ನಾಟಕ ಮೂಲದ ಕಿರಣ್ ಮತ್ತು ವಿದ್ಯಾರಾಣಿ ದಂಪತಿ ಆನೇಕಲ್ ವೊಂದರ ಬಡಾವಣೆಯಲ್ಲಿ ವಾಸವಿದ್ದರು. ಮನೆಯಲ್ಲಿಯೇ ಇರುತ್ತಿದ್ದ ವಿದ್ಯಾರಾಣಿಗೆ ಸೋಷಿಯಲ್ ಮೀಡಿಯಾ ಆ್ಯಪ್ ನಲ್ಲಿ ರಾಮ್ ಪ್ರಸಾದ್ ಎನ್ನುವ ವ್ಯಕ್ತಿಯ ಪರಿಚಯವಾಗಿದ್ದು. ಗಂಡ ಕೆಲಸಕ್ಕೆ ಹೋದ ನಂತರ ವಿದ್ಯಾರಾಣಿ ರಾಮ್ ಪ್ರಸಾದ್ ಜೊತೆ ನಿರಂತರ ಚ್ಯಾಟಿಂಗ್ ಮಾಡುತ್ತಿದ್ದಳು. ಇದು ಗಂಡ ಕಿರಣ್ ಗೆ ಗೊತ್ತಾಗಿ ಮೊಬೈಲ್ ಹೊಡೆದು ಹಾಕಿದ್ದು. ಈ ವಿಚಾರವನ್ನು ವಿದ್ಯಾರಾಣಿ ಬೇರೆ ನಂಬರ್ ಮೂಲಕ ರಾಮ್ ಪ್ರಸಾದ್ ಗೆ ತಿಳಿಸಿದ್ದಳು.
ಗಂಡನಿಗೆ ಬುದ್ಧಿ ಕಲಿಸಬೇಕೆಂದು ವಿದ್ಯಾರಾಣಿ ಆಕೆಯ ಪ್ರಿಯಕರ ರಾಮ್ ಪ್ರಸಾದ್ ಪ್ಲಾನ್ ಮಾಡಿದ್ದು. ನಾನು ಕಳುಹಿಸುವ ಮೆಸೇಜ್ ನ ಗಂಡನ ಮೊಬೈಲ್ ನಂಬರ್ ನಿಂದ ಫಾರ್ವಡ್ ಮಾಡು ಅಂತ ಸೂಚನೆ ನೀಡಿದ್ದನು. ಡಿಸೆಂಬರ್ 5ರಂದು ಆರ್ ಡಿ ಎಕ್ಸ್ ಬಾಂಬ್ ಹಾಕುವುದಾಗಿ ಬೆದರಿಕೆ ಮೆಸೇಜ್ ಅನ್ನು ಕಿರಣ್ ನಂಬರ್ ನಿಂದ ತನಿಖಾ ಸಂಸ್ಥೆಗಳಿಗೆ ರವಾನೆ ಮಾಡಿ ಬಳಿಕ ಗಂಡನ ಮೊಬೈಲ್ ನಿಂದ ಮೆಸೇಜ್ ಡಿಲೀಟ್ ಮಾಡಿದ್ದಳು. ಮೆಸೇಜ್ ಬಂದಿದ್ದ ನಂಬರ್ ನ ಮೂಲ ಹುಡುಕಿ ಹೊರಟಿದ್ದ ಪೊಲೀಸರು ಮತ್ತು ತನಿಖಾ ಸಂಸ್ಥೆಗಳು, ಕಿರಣ್ ಮನೆಗೆ ಬಂದಿದ್ದಾರೆ.
ನಂತರ, ಇಬ್ಬರನ್ನು ವಿಚಾರಣೆ ಮಾಡಿದಾಗ ಸತ್ಯ ಬಯಲಿಗೆ ಬಂದಿದೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲು ಆಗಿದೆ. ಶೀಘ್ರದಲ್ಲೇ ವಿದ್ಯಾರಣಿಯ ಪ್ರಿಯಕರ ರಾಮ ಪ್ರಸಾದನನ್ನು ಬಂಧಿಸುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.