ಜೈಪುರ, ಡಿ 6 (DaijiworldNews/MS): ರಾಜಸ್ಥಾನದ ಪ್ರಮುಖ ರಜಪೂತ ನಾಯಕ, ಹಾಗೂ ವಿವಾದಾತ್ಮಕ ಸಂಘಟನೆ ರಜಪೂತ ಕರ್ಣಿ ಸೇನೆಯನ್ನು ಮುನ್ನಡೆಸುತ್ತಿದ್ದ ಸುಖದೇವ್ ಸಿಂಗ್ ಗೊಗಾಮೇದಿ ಹತ್ಯೆ ಆರೋಪಿಗಳನ್ನು ಬಂಧಿಸಲಾಗಿದೆ.
ರಾಜಸ್ಥಾನದ ಹರಿಯಾಣದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಶೂಟರ್ಗಳಾದ ರೋಹಿತ್ ರಾಥೋಡ್ ಮತ್ತು ನಿತಿನ್ ಫೌಜಿಯನ್ನು ಪೊಲೀಸರು ಬಂಧಿಸಿದ್ದಾರೆ. ರೋಹಿತ್ ಬಿಕಾನೇರ್ ಮೂಲದವನಾಗಿದ್ದು, ನಿತಿನ್ ಮಹೇಂದ್ರಗಢ್ ಮೂಲದವನಾಗಿದ್ದಾನೆ.
ರಾಷ್ಟ್ರೀಯ ರಜಪೂತ ಕರ್ಣಿ ಸೇನಾದ ಮುಖ್ಯಸ್ಥನಾಗಿದ್ದ ಸುಖದೇವ್ ಅವರು ತನ್ನ ಜೈಪುರ ನಿವಾಸದ ಬಳಿ ಇದ್ದಾಗ, ಗೊಗಮೆಡಿ ಅವರನ್ನು ಭೇಟಿ ಮಾಡುವ ನೆಪದಲ್ಲಿ ಸ್ಕೂಟರ್ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು. ಸುಖದೇವ್ ಸಿಂಗ್ ಮತ್ತು ಅವರ ಇಬ್ಬರು ಸಹವರ್ತಿಗಳಿಗೆ ಗುಂಡೇಟಿನಿಂದ ಗಾಯಗಳಾಗಿದ್ದವು. ಮೂವರನ್ನೂ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಸುಖದೇವ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಗಾಯಾಳುಗಳಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ.
ಘಟನೆ ಬಳಿಕ ಇದು ತನ್ನ ಕೃತ್ಯ ಎಂದು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೇಳಿಕೊಂಡಿತ್ತು.