ನೆಲಮಂಗಲ, ಡಿ, 9(DaijiworldNews/AK): ತಮ್ಮ ತೋಟದಲ್ಲೇ ಮಣ್ಣಲ್ಲಿ ಲೀನವಾದ ಹಿರಿಯ ನಟಿ ಲೀಲಾವತಿ . ಸೋಲದೇವನಹಳ್ಳಿ ಬಳಿ ಲೀಲಾವತಿ ಅವರ ಫಾರ್ಮ್ ಹೌಸ್ ಬಳಿ ಇರುವ ತೋಟದಲ್ಲೇ ಹಿಂದೂ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನೇರವೇರಿಸಲಾಯಿತು.
ಅಂತಿಮ ವಿಧಿ ವಿಧಾನ ಕಾರ್ಯವನ್ನು ಪುತ್ರ ವಿನೋದ್ ರಾಜ್ ಹಾಗೂ ಮೊಮ್ಮಗ ಯುವರಾಜ್ ನೆರವೇರಿಸಿದರು.
ಬೆಂಗಳೂರಿನಿಂದ ಪಾರ್ಥಿವ ಶರೀರ ಹೊತ್ತು ತಂದ ಅಂಬುಲೆನ್ಸ್ ಅನ್ನು ನಿಲ್ಲಿಸಿ ಅಲ್ಲಲ್ಲಿ ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳುವುದಕ್ಕಾಗಿಯೇ ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಮತ್ತು ಲೀಲಾವತಿ ಅವರು ಅಭಿಮಾನಿಗಳು ಸೋಲದೇವನಹಳ್ಳಿಗೆ ಆಗಮಿಸಿದ್ದರು.ನೆಚ್ಚಿನ ನಟಿಗೆ ಕಣ್ಣಿರಿನ ವಿದಾಯ ಹೇಳಿದರು.