ಮುಂಬೈ , ಡಿ 10(DaijiworldNews/RA):ಪ್ರತಿ ವರ್ಷವು ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆ ಬರೆದರೂ ಸಹ ಆಯ್ಕೆ ಆಗುವುದು ಕೇವಲ ಸಾವಿರಾರು ಅಭ್ಯರ್ಥಿಗಳು ಮಾತ್ರ. ಅದರಲ್ಲೂ ಕೆಲವರು ತಮ್ಮ ಬಡತನ, ಆರ್ಥಿಕ ಸ್ಥಿತಿಯ ಹೆಚ್ಚಿನ ಸಮಸ್ಯೆಗಳು ಇದ್ದರೂ ಸಹ ಯುಪಿಎಸ್ಸಿ ಪರೀಕ್ಷೆಗಳಿಗೆ ಓದಿ ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಾಗುವವರು ಇದ್ದಾರೆ. ಅಂತವರಲ್ಲಿ ಯುವ ಪೀಳಿಗೆಗೆ ಮಾದರಿ, ಆದರ್ಶ, ಸ್ಫೂರ್ತಿ ಹೆಸರು ಕೆ. ಜಯಗಣೇಶ್.
ಇವರು ಬಡಕುಟುಂಬದ ಒಬ್ಬ ಯುಪಿಎಸ್ಸಿ ಆಕಾಂಕ್ಷಿ. ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಹೆಚ್ಚು ಕಷ್ಟಗಳನ್ನು ಅನುಭವಿಸಿದರು.ಸಿನಿಮಾ ಥಿಯೇಟರ್ನಲ್ಲಿ
ಬಿಲ್ ಕಲೆಕ್ಟರ್ ಆಗಿ ಹೋಟೆಲ್ ನಲ್ಲಿ ಮಾಣಿ ಕೆಲಸ ಮಾಡಿದರು.ಈ ನಡುವೆ ಹಲವು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದರೂ ಕೂಡ ಅವರು ಫೇಲ್ ಆದರು.
ಆದ್ರೂ ಡೋಂಟ್ ಗೀವಪ್ ಎಂಬ ಉತ್ಸಾಹದಿಂದ ಗುರಿ ಬಿಡದೇ ಪರೀಕ್ಷೆ ಬರೆದ ಅವರು 7ನೇ ಪ್ರಯತ್ನದಲ್ಲಿ ಐಎಎಸ್ ಪಾಸ್ ಮಾಡಿದರು.
ಇವರ ತಂದೆ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದರೆ ಅವರ ದುಡಿಮೆ ಕುಟುಂಬ ನಿರ್ವಹಣೆ ಮಾಡುವುದಕ್ಕೆ ಜೀವನಾಂಶ ಸಾಕಾಗುತ್ತಿರಲಿಲ್ಲ.ಪರಿಸ್ಥಿತಿ ಹೀಗಿರುವಾಗ ಜಯಗಣೇಶ್ ಗೆ ಯುಪಿಎಸ್ಸಿ ಸಿದ್ಧತೆಗೆ ಸಹಾಯ ಮಾಡಲು ಸಾಧ್ಯವೆ ಇರಲಿಲ್ಲ. ಆದ್ರೂ ಇಂತಹ ಕಷ್ಟಗಳ ನಡುವೆ ನೆವರ್ ಗಿವಪ್ ಎಂದು ತಮ್ಮ ಯುಪಿಎಸ್ ಸಿ ಜರ್ನಿಯಲ್ಲಿ ನಡೆದವರು ಇವರು.
ಯುಪಿಎಸ್ ಸಿ ಪರೀಕ್ಷೆಯ ತಮ್ಮ ಕೊನೆಯ ಪ್ರಯತ್ನದಲ್ಲಿರುವಾಗಲೇ ಇಂಟೆಲಿಜೆನ್ಸ್ ಬ್ಯುರೋ ಪರೀಕ್ಷೆ ಬರೆದಿದ್ದ ಇವರು ಆ ಹುದ್ದೆಗೆ ಆಯ್ಕೆಯಾಗಿದ್ದರು.ಈ ವೇಳೆ ಅವರಿಗೆ ಈ ಹುದ್ದೆ ಆಯ್ಕೆ ಮಾಡುವುದೋ ಕೊನೆ ಪ್ರಯತ್ನದ ಯುಪಿಎಸ್ಸಿ ಪರೀಕ್ಷೆ ಬರೆಯುವುದೋ ಎನ್ನುವ ಸಂಶಯದಲ್ಲಿದ್ದರು.
ಕೊನೆಗೆ ಸಿಎಸ್ಇ ಪರೀಕ್ಷೆಯನ್ನು ಆಯ್ಕೆ ಮಾಡಿದ ಇವರು 2008 ರಲ್ಲಿ ದೇಶದ ಅತಿ ಕಠಿಣ ಪರೀಕ್ಷೆಯನ್ನು ಗೆದ್ದರು.
ಜಯಗಣೇಶ್ ತಮ್ಮ ಶಾಲಾ ಶಿಕ್ಷಣವನ್ನು ಅವರ ಗ್ರಾಮದಲ್ಲೇ ಪಡೆದವರು. ಪ್ರೌಢಶಿಕ್ಷಣದ ನಂತರ ಪಾಲಿಟೆಕ್ನಿಕ್ ಕಾಲೇಜಿಗೆ ಸೇರಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಅನ್ನು ತಂತಿ ಪೆರಿಯಾರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದಿದರು. ಈ ಎರಡು ಡಿಗ್ರಿಗಳು ಸಹ ಅವರಿಗೆ ಡೀಸೆಂಟ್ ಜಾಬ್ ಪಡೆಯಲು ಸಮಾಧಾನ ನೀಡಿರಲಿಲ್ಲ.
ಬಿಇ ಪದವಿ ನಂತರ ಇವರು ಸಿನಿಮಾ ಥಿಯೇಟರ್ನಲ್ಲಿ ಬಿಲ್ಲಿಂಗ್ ಕ್ಲರ್ಕ್ ಹುದ್ದೆಗೆ ಸೇರಲು ನಿರ್ಧರಿಸಿದರು. ಜತೆಗೆ ಹೋಟೆಲ್ನಲ್ಲಿ ಮಾಣಿ ಆಗಿ ಕೆಲಸ ಮಾಡಲು ಆರಂಭಿಸಿದರು.
ಈ ಜಾಬ್ ಗಳಿಂದ ಅವರ ನಿರೀಕ್ಷೆಯ ದುಡಿಮೆ ಕಾಣಲು ಆಗಲಿಲ್ಲ. ಇಷ್ಟು ಕಡಿಮೆ ಹಣದಿಂದ ಕುಟುಂಬ ನಿರ್ವಹಣೆ ಅಸಾಧ್ಯ ಎಂದು ಅರಿತುಕೊಂಡರು.
ಜತೆಗೆ ಇವರು ಐಎಎಸ್ ಅಧಿಕಾರಿ ಆಗುವ ಕನಸು ಕಂಡಿದ್ದರು.ಆದ ಕಾರಣ ಈ ಎಲ್ಲ ಕೆಲಸಕ್ಕೆ ಗುಡ್ ಬಾಯ್ ಹೇಳಿ, ನಮ್ಮ ಕನಸಿನ ಹುದ್ದೆಯ ಕಡೆ ವರ್ಕ್ ಮಾಡಲು ಆರಂಭಿಸಿದರು.
ಜಯಗಣೇಶ್ 2008 ನೇ ಸಾಲಿನಲ್ಲಿ ಆಲ್ ಇಂಡಿಯಾ ರ್ಯಾಂಕ್ 156 ರೊಂದಿಗೆ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿ, ಐಎಎಸ್ ಅಧಿಕಾರಿಯಾದವರು. ಇವರು 6 ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಫೇಲ್ ಆದರೂ ಸಹ ಛಲ ಬಿಡದೇ 7ನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪಾಸ್ ಮಾಡಿದವರು.ಇವರ ಈ ಸಾಧನೆಯ ಜರ್ನಿ ಎಷ್ಟೋ ಬಡತನ ಕುಟುಂಬದಿಂದ ಬರುವವರಿಗೆ ಸ್ಫೂರ್ತಿಯಾಗಬಲ್ಲದು ಅನ್ನುವುದರಲ್ಲಿ ಎರಡು ಮಾತಿಲ್ಲ.