ಚೆನ್ನೈ, ಡಿ 10 (DaijiworldNews/SK): ಚೆನ್ನೈನಲ್ಲಿ ಮೈಚಾಂಗ್ ಚಂಡಮಾರುತ ಅಲ್ಲೋ ಕಲ್ಲೋಲ ಸೃಷ್ಟಿಸಿದ್ದು ಜನ ಜೀವನ ಅಸ್ತವ್ಯಸ್ಥವಾಗಿದ್ದು, ಅಗತ್ಯವಸ್ತುಗಳಿಗೂ ಜನ ಪರದಾಡುವ ಸ್ಥಿತಿ ಉಂಟಾಗಿದೆ.
ಈ ಮಧ್ಯೆ ಚೆನ್ನೈನ ತಾಂಬರಂ ಬಳಿಯ ಕಾಲುವೆಯಲ್ಲಿ ಆವಿನ್ ಹಾಲಿನ ನೂರಾರು ಪ್ಯಾಕೆಟ್ಗಳು ಎಸೆದಿರುವುದು ಕಂಡುಬಂದಿದೆ.
ರಾಜ್ಯ ಸರ್ಕಾರ ನಡೆಸುತ್ತಿರುವ ಆವಿನ್ನ ಹಾಲಿನ ಪ್ಯಾಕೆಟ್ಗಳು ಡಿಸೆಂಬರ್ 4 ರಂದು ಎಕ್ಸೆಪೆರಿ ಡೇಟ್ ಮುಗಿದಿದ್ದು, ಆದ ಕಾರಣ ಹಾಲಿನ ವಿತರಕರು ಪ್ಯಾಕೆಟ್ ಗಳನ್ನು ಕಾಲುವೆಗೆ ಎಸೆದಿದ್ದಾರೆ.
ಈ ಘಟನೆಯಿಂದ ಚಂಡಮಾರುತದ ನಂತರದ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ನಿಭಾಯಿಸುವ ಬಗ್ಗೆ ಹಲವಾರು ಪ್ರಶ್ನೆ ಉದ್ಭವಿಸಿದೆ. ಚಂಡಮಾರುತದಿಂದಾಗಿ ನಗರವು ಸಹಜ ಸ್ಥಿತಿಗೆ ಮರಳಲು ಹೆಣಗಾಡುತ್ತಿರುವಾಗ ಹಾಲಿನ ಬೆಲೆ ಏರಿಕೆ ಮಾಡಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.