ಜೈಪುರ, ಡಿ 12 (DaijiworldNews/SK): ಕರ್ಣಿಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಗಳಿಗೆ ಬಂದೂಕು ಒದಗಿಸಿದ್ದ ಮಹಿಳೆಯೊರ್ವರನ್ನು ರಾಜಸ್ಥಾನ ಪೊಲೀಸರು ಡಿ.11ರಂದು
ಬಂಧಿತ ಮಹಿಳೆಯನ್ನು ಪೂಜಾ ಸೈನಿ ಎಂದು ಗುರುತಿಸಲಾಗಿದೆ.
ಜೈಪುರದ ಜಗತ್ಪುರ ಪ್ರದೇಶದಲ್ಲಿ ಡಿ. ೫ ರಂದು ಕರ್ಣಿಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಅವರ ಹತ್ಯೆ ನಡೆದಿತ್ತು. ಹತ್ಯೆ ಆರೋಪಿಯಾಗಿದ್ದ ಶೂಟರ್ ಒರ್ವನಿಗೆ ಪೂಜಾ ಸೈನಿ ಮತ್ತು ಆಕೆಯ ಪತಿ ಮಹೇಂದ್ರ ಮೇಘವಾಲ್ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾರೆ ಎಂದು ಜೈಪುರ ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್ ತಿಳಿಸಿದ್ದು, ಇದರ ಜೊತೆಗೆ ಅವರ ಫ್ಲಾಟ್ನಿಂದ ಎಕೆ-47 ರೈಫಲ್ ಹಾಗೂ ಇನ್ನಿತರೆ ಶಸ್ತ್ರಾಸ್ತ್ರಗಳನ್ನು ಕೂಡ ವಶಪಡೆಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಪೂಜಾ ಪತಿ ಮೇಘವಾಲ್ ಪರಾರಿಯಾಗಿದ್ದು, ಪೊಲೀಸರು ಈತನ ಬಂಧನಕ್ಕೆ ಬಲೆಬೀಸಿದ್ದಾರೆ.
ಕೃತ್ಯ ನಡೆಯುವ ಮೊದಲು ಆರೋಪಿಯಾದ ನಿತಿನ್ ಫೌಜಿ ಜೈಪುರದಲ್ಲಿರುವ ಪೂಜಾ ಸೈನಿಯ ಫ್ಲಾಟ್ ನಲ್ಲಿ ಉಳಿದಿದ್ದು, ಇದರೊಂದಿಗೆ ತಮಗೆ ಬೇಕಾದ ಎಲ್ಲಾ ಪಿಸ್ತೂಲು ಮತ್ತು ಮ್ಯಾಗಜೀನ್ಗಳನ್ನು ಖರೀದಿಸಿದ್ದರು ಎಂದು ತಿಳಿದು ಬಂದಿದೆ.