ಚೆನ್ನೈ, ಡಿ 14 (DaijiworldNews/MR): ಖ್ಯಾತ ನಟನ ಮಗನಗಿದ್ದರೂ, ತಂದೆಯಂತೆ ಸಿನಿಮಾ ಕಡೆ ಒಲವು ತೋರದೆ ದೇಶ ಸೇವೆಗಾಗಿ ಐಎಎಸ್ ಅಧಿಕಾರಿಯಾದವರು ಶ್ರುತಂಜಯ ನಾರಾಯಣನ್.
ಶ್ರುತಂಜಯ ಖ್ಯಾತ ತಮಿಳು ನಟ ಚಿನ್ನಿ ಜಯಂತ್ ಅವರ ಪುತ್ರರಾಗಿದ್ದಾರೆ. ಚಿನ್ನಿ ಜಯಂತ್ ರಜನಿಕಾಂತ್ ಅಭಿನಯದ 80ರ ದಶಕದ ಚಲನಚಿತ್ರಗಳಲ್ಲಿನ ಹಾಸ್ಯ ಅಭಿನಯಕ್ಕಾಗಿ ಹೆಸರುವಾಸಿಯಾದ ತಮಿಳು ನಟರಲ್ಲಿ ಒಬ್ಬರು.
ಶ್ರುತಂಜಯ ನಾರಾಯಣನ್ ಅವರು ಐಎಎಸ್ ಅಧಿಕಾರಿಯಾಗುವ ಗುರಿ ಸಾಧನೆಗೆ ದಿನಕ್ಕೆ 10-12 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಅವರ ಸತತ ಪ್ರಯತ್ನವು ಫಲ ನೀಡಿದ್ದು, UPSC ಪರೀಕ್ಷೆಯಲ್ಲಿ 100ರ ಶ್ರೇಯಾಂಕ ಪಟ್ಟಿಯಲ್ಲಿ ಇವರ ಹೆಸರು ಸೇರಿದೆ.
ಪ್ರಸ್ತುತ ಅವರು ತಮಿಳುನಾಡಿನ ತಿರುಪ್ಪೂರ್ನಲ್ಲಿ ಸಬ್-ಕಲೆಕ್ಟರ್ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶ್ರುತಂಜಯ ನಾರಾಯಣನ್ ಎರಡನೇ ಪ್ರಯತ್ನದಲ್ಲಿ ಯುಪಿಎಸ್ ಸಿ 2015ರಲ್ಲಿ 75 ನೇ ರ್ಯಾಂಕ್ ಗಳಿಸುವ ಮೂಲಕ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಶ್ರುತಂಜಯ ನಾರಾಯಣನ್ ಹಲವಾರು ಶಾಲಾ ಮತ್ತು ಕಾಲೇಜು ನಾಟಕಗಳಲ್ಲಿ ನಟಿಸಿದ್ದಾರೆ, ಆದರೆ ಅವರು ಅದನ್ನು ವೃತ್ತಿಪರ ತೆಗೆದುಕೊಳ್ಳದೇ ಕೇವಲ ಹವ್ಯಾಸಕ್ಕಾಗಿ ನಟಿಸುತ್ತಿದ್ದರು. ಚಿನ್ನಿ ಜಯಂತ್ ಅವರಿಗೆ ತಮ್ಮ ಮಗ ಸಿನಿಮಾವನ್ನು ವೃತ್ತಿಯಾಗಿ ತೆಗೆದುಕೊಳ್ಳುವುದು ಇಷ್ಟವಿರಲಿಲ್ಲ.
ಶ್ರುತಂಜಯ ನಾರಾಯಣನ್ ಐಎಎಸ್ ಆಗುವ ಮೊದಲು ಸ್ಟಾರ್ಟ್ಅಪ್ ನಲ್ಲಿ ಕೆಲಸ ಮಾಡುತ್ತಿದ್ದರು, ಅದರ ಜೊತೆಗೆ ಅವರು 4-5 ಗಂಟೆಗಳ ಕಾಲ ಸ್ವಯಂ ಅಧ್ಯಯನ ಮಾಡುತ್ತಿದ್ದರು. ಆ ಸಮಯದಲ್ಲಿ ಅವರು ರಾತ್ರಿ ಸಮಯದಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಿ, ಬೆಳಗಿನ ಸಮಯದಲ್ಲಿ ಅಧ್ಯಯನ ಮಾಡುತ್ತಿದ್ದರು.
ಪರೀಕ್ಷೆಗೆ ಕೆಲವು ವಾರಗಳ ಮೊದಲು, ಅವರು ತಮ್ಮ ಅಧ್ಯಯನದ ದಿನಚರಿಯನ್ನು ಬದಲಾಯಿಸಿಕೊಳ್ಳುತ್ತಿದ್ದರು. ನಂತರ ಅವರು 10-12 ಗಂಟೆಗಳ ಕಾಲ ಅಧ್ಯಯನಕ್ಕೆ ಮೀಸಲಿಡುತ್ತಿದ್ದರಂತೆ. ಇದರೊಂದಿಗೆ ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಿದ್ದ ನಾರಾಯಣ್ ಉತ್ತಮ ಆಹಾರ ಮತ್ತು ನಿದ್ರೆಯ ಜೊತೆಗೆ ಯೋಗವೂ ಅವರ ದಿನಚರಿಯ ಭಾಗವಾಗಿತ್ತು.
ಶ್ರುತಂಜಯ ನಾರಾಯಣನ್ 2015 ರ ಬ್ಯಾಚ್ನ IAS ಅಧಿಕಾರಿಯಾಗಿದ್ದು, ತಮ್ಮ ಎರಡನೇ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರುತಂಜಯ್ ಅವರು UPSC ಪರೀಕ್ಷೆಗೆ ತಯಾರಿ ನಡೆಸುವಾಗ ಕುಟುಂಬ ಮತ್ತು ಸ್ನೇಹಿತರ ಬೆಂಬಲ ಪ್ರಮುಖ ಪಾತ್ರವಹಿಸಿದ್ದಾರೆ ಎಂದಿದ್ದಾರೆ. ಯುಪಿಎಸ್ಸಿ ವ್ಯವಸ್ಥೆಯು ಸುದೀರ್ಘ ಪ್ರಕ್ರಿಯೆಯಾಗಿದ್ದು ಮಾರ್ಗದರ್ಶಕರನ್ನು ಹೊಂದಿರುವುದು ಬಹಳ ಮುಖ್ಯ ಎಂದು ಅವರು ಹೇಳಿದ್ದಾರೆ.