ನವದೆಹಲಿ, ಡಿ 15 (DaijiworldNews/AK):ಸಂಸತ್ ಮೇಲಿನ ದಾಳಿಯ ಪ್ರಮುಖ ರೂವಾರಿ ಎಂದೇ ಕರೆಸಿಕೊಳ್ಳುತ್ತಿರುವ ಲಲಿತ್ ಝಾ ಹೆಚ್ಚಿನ ವಿಚಾರಣೆಗೆ ಏಳು ದಿನಗಳ ಕಾಲ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ.
ಲಲಿತ್ ಝಾನನ್ನು ಶುಕ್ರವಾರ ಪಟಿಯಾಲ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು, ಘಟನೆಯ ಪ್ರಮುಖ ಆರೋಪಿಯಾಗಿದ್ದು, ವಿಚಾರಣೆಗೆ ಹದಿನೈದು ದಿನಗಳ ಸಮಯಬೇಕು ಎಂದು ಪೊಲೀಸರ ಪರ ವಕೀಲರು ಮನವಿ ಮಾಡಿದರು.
ಬಳಿಕ ಘಟನೆಯ ವಿವರ ನೀಡಿದ ಪಬ್ಲಿಕ್ ಪ್ರಾಸಿಕ್ಯೂಟರ್ ಅಖಂಡ ಪ್ರತಾಪ್ ಸಿಂಗ್ ಇಂದು ದೆಹಲಿ ಪೊಲೀಸರ ಪರವಾಗಿ ಹಾಜರಾಗಿ ಝಾನನ್ನು ಹದಿನೈದು ದಿನಗಳ ಕಸ್ಟಡಿಗೆ ಕೋರಿದರು. ಆದರೆ ಪಟಿಯಾಲ ಹೌಸ್ ಕೋರ್ಟ್ ನ್ಯಾಯಾಧೀಶರು ೭ ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.
ಘಟನೆಯ ಬಳಿಕ ರಾಜಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ಲಲಿತ್ ಝಾ ಗುರುವಾರ ರಾತ್ರಿ ಏಕಾಏಕಿ ಕರ್ತವ್ಯಪಥ್ ಪೊಲೀಸ್ ಠಾಣೆಗೆ ಬಂದು ಶರಣಾದನು. ಆತನನ್ನು ಬಂಧಿಸಿದ ಪೊಲೀಸರು ಪ್ರಕರಣ ತನಿಖೆ ನಡೆಸುತ್ತಿರುವ ಸ್ಪೇಷಲ್ ಟೀಂಗೆ ಹಸ್ತಾಂತರ ಮಾಡಿದರು. ಶನಿವಾರ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಸಬ್ದರ್ಜಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ಕೋರ್ಟ್ ಮುಂದೆ ಹಾಜರುಪಡಿಸಿದರು.
ಪಶ್ಚಿಮ ಬಂಗಾಳ ಮೂಲದ ಲಲಿತ್ ಝಾ ಪ್ರಮುಖ ಆರೋಪಿಯಾಗಿದ್ದು, ಈ ಮೊದಲು ಬಂಧಿತರಾಗಿರುವ ಮನೋರಂಜರ್, ಸಾಗರ್ ಶರ್ಮಾ, ಅಮುಲ್ ಶಿಂಧೆ, ನೀಲಂಕೌರ್ ಗೆ ಸಂಸತ್ನಲ್ಲಿ ದಾಳಿ ನಡೆಸಲು ಪ್ರೇರೆಪಿಸಿದ್ದಾರೆ ಎನ್ನಲಾಗಿದೆ. ಗುರುಗ್ರಾಮ ಮನೆಯೊಂದರಲ್ಲಿ ಎಲ್ಲರಿಗೂ ತರಬೇತಿ ನೀಡಿ ಜವಬ್ದಾರಿ ನೀಡಿದ್ದ ಎನ್ನಲಾಗಿದೆ.