ತಿರುವನಂತಪುರಂ, ಡಿ 15 (DaijiworldNews/AA): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 'ಕೆಎಸ್ ಆರ್ ಟಿಸಿ' ಟ್ರೇಡ್ ಮಾರ್ಕ್ ಅನ್ನು ಬಳಸಬಾರದೆಂದು ಕೇರಳ ರಾಜ್ಯ ಆರ್ ಟಿಸಿ ಸಲ್ಲಿಸಿದ ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆಎಸ್ ಆರ್ ಟಿಸಿ ಹೆಸರು ಬಳಸಬಾರದು. ನಮಗೆ ಮಾತ್ರ ಕೆಎಸ್ ಆರ್ ಟಿಸಿ ಹೆಸರು ಬಳಸಲು ಅನುಮತಿ ನೀಡಬೇಕು ಎಂದು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಮದ್ರಾಸ್ ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿತ್ತು. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅವರು ಕೆಎಸ್ ಆರ್ ಟಿಸಿ ಹೆಸರು ಬಳಸಬಹುದು. ಇದಕ್ಕೆ ಯಾವುದೇ ರೀತಿಯಾದ ಕಾನೂನಾತ್ಮಕ ಅಡ್ಡಿ, ನಿರ್ಬಂಧಗಳಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಸ್ಪಷ್ಟನೆ ನೀಡಿದೆ.
2013 ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಭಾರತ ಸರ್ಕಾರದ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಲ್ಲಿ ಕೆಎಸ್ ಆರ್ ಟಿಸಿ ಹೆಸರು ನೋಂದಣಿ ಮಾಡಿ ಟ್ರೇಡ್ ಮಾರ್ಕ್ ಪ್ರಮಾಣ ಪತ್ರವನ್ನು ಪಡೆದಿತ್ತು. ಜೊತೆಗೆ ಗಂಡಭೇರುಂಡ ಚಿನ್ಹೆಯನ್ನು ಟ್ರೇಡ್ ಮಾರ್ಕ್ ಆಗಿ ಪಡೆದುಕೊಂಡಿತ್ತು.