ನವದೆಹಲಿ, ಡಿ 18 (DaijiworldNews/MR): ಕೋವಿಡ್ ಸಾಂಕ್ರಮಿಕದ ಭೀತಿ ಮತ್ತೆ ಹೆಚ್ಚಾಗುತ್ತಿದ್ದು, ಕೇರಳದಲ್ಲಿ ಉಪತಳಿ JN.1ಪತ್ತೆಯಾಗಿರುವ ನಡುವೆ ದೇಶದಲ್ಲಿ ಆಕ್ಟೀವ್ ಕೇಸ್ ಗಳ ಸಂಖ್ಯೆ 1,300 ಗಡಿ ದಾಟಿದೆ. ಈ ಪೈಕಿ 1,523 ಪ್ರಕರಣಗಳು ಕೇರಳದ್ದೇ ಆಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಡಿ.19 ತಾಂತ್ರಿಕ ಸಲಹಾ ಸಮಿತಿ ಸಭೆ ಕೂಡ ಇದ್ದು. ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 335 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ 79 ವರ್ಷದ ಮಹಿಳೆಯರಲ್ಲಿ ಹೊಸ ರೂಪಾಂತರ ಪತ್ತೆಯಾಗಿದ್ದು, ಐದು ಸಾವುಗಳು ದಾಖಲಾಗಿವೆ. ಅದರಲ್ಲಿ ನಾಲ್ಕು ಕೇರಳದಲ್ಲಿ ಮತ್ತು ಒಂದು ಉತ್ತರ ಪ್ರದೇಶದಲ್ಲಿ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಅನೇಕ ದೇಶಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಎಲ್ಲಾ ಪೀಡಿತ ದೇಶಗಳಲ್ಲಿ ಪರೀಕ್ಷೆಯನ್ನು ಮುಂದುವರಿಸಲು ಸೂಚನೆ ನೀಡಿದೆ. ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ಕೂಡ ನಿಗಾ ವಹಿಸಲು ಸೂಚನೆ ನೀಡಲಾಗಿದೆ.