ಬೆಂಗಳೂರು, ಡಿ 18 (DaijiworldNews/SK): ಕೋವಿಡ್ ಸಾಂಕ್ರಮಿಕದ ಭೀತಿ ಮತ್ತೆ ರಾಜ್ಯದ ಜನರನ್ನು ಕಾಡುತ್ತಿದ್ದು, ಕೇರಳದಲ್ಲಿ ಉಪತಳಿ JN.1ಪತ್ತೆಯಾಗಿ ಹೊಸ ಪ್ರಕರಣಗಳು ದಾಖಲಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕೋವಿಡ್ ಗೈಡ್ಲೈನ್ಸ್ ಬಿಡುಗಡೆ ಮಾಡಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.
ಈ ನಿಯಮನುಸಾರ ಮುಂಬರುವ ಹಬ್ಬ ಹರಿದಿಗಳ ಮೇಲೆ ನಿಗಾ ವಹಿಸಲಾಗಿದ್ದು, ಪ್ರತಿ ಜಿಲ್ಲೆ ಮತ್ತು ನಗರಗಳಲ್ಲಿ ಆರ್ಟಿಪಿಸಿಆರ್, ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡಲು ಆದೇಶ ಹೊರಡಿಸಲಾಗಿದೆ.
ಇನ್ನು ಐಎಲ್ಐ, ಸ್ಯಾರಿ ಕೇಸ್ಗಳ ಮೇಲೆ ನಿಗಾ ಇಡಲು ಚಿಕಿತ್ಸೆ ಬೇಕಾದ ಎಲ್ಲಾ ಮೂಲ ಸೌಕರ್ಯ ಕ್ರೋಢೀಕರಣ ಮಾಡಲಾಗಿದ್ದು, ಆರ್ಟಿಪಿಸಿಆರ್ ಪಾಸಿಟಿವ್ ಬಂದರೆ ಜೆನೆಮಿಕ್ ಸೀಕ್ವೆನ್ಸ್ಗೆ ಸ್ಯಾಂಪಲ್ ಕಳಿಸಬೇಕು. ಆ ಮೂಲಕ ಕೋವಿಡ್ ರೂಲ್ಸ್ ನಿರ್ಧಾರವನ್ನು ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ವಹಿಸಿದೆ